ಮಂಡ್ಯ [ಅ.04]: ರಾಜ್ಯ ಸರ್ಕಾರದಲ್ಲಿ ಹಣವಿದೆ. ಆದರೆ  ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. 

ಮಂಡ್ಯ ಜಿಲ್ಲೆಗೆ ಇಂದು ಭೇಟಿ ನೀಡಿದ್ದ ಕಂದಾಯ ಸಚಿವ ಆರ್ ಅಶೋಕ್ ನನ್ನ ಪ್ರಕಾರ ನೆರೆ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ. ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಪ್ರವಾಹದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ವರದಿಯನ್ನು ತಿರಸ್ಕರಿಸಿಲ್ಲ ಎಂದು ಹೇಳಿದರು. 

ಈಗಾಗಲೇ ನೆರೆ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ವರದಿಯಲ್ಲಿ ಕೆಲವು ಬದಲಾವಣೆ ಬಯಸಿದ್ದಾರೆ. ರಾಜ್ಯ ಸರ್ಕಾರದ ವರದಿ ಮತ್ತು ಕೇಂದ್ರ ಸರ್ಕಾರದ ವರದಿಗಳಲ್ಲಿ ಸಾಮ್ಯತೆ ಇದೆ.  ನಮ್ಮ ರಾಜ್ಯಕ್ಕೆ ಪರಿಹಾರ ನೀಡಿದರೆ ಬೇರೆ ರಾಜ್ಯದಲ್ಲಿಯೂ ಕೇಳುತ್ತಾರೆ. ಈ ನಿಟ್ಟಿನಲ್ಲಿ ತಡವಾಗುತ್ತಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೇರೆ ರಾಜ್ಯಗಳಲ್ಲೂ ನೆರೆ ಉಂಟಾಗಿರುವುದರಿಂದ ಎಲ್ಲಾ ರಾಜ್ಯಗಳಿಗೂ ಒಟ್ಟಿಗೆ ಪರಿಹಾರದ ಹಣವನ್ನು ನೀಡಲು ನಿರ್ಧರಿಸಿದಂತೆ ಕಾಣುತ್ತದೆ. ಈ ನಿಟ್ಟಿನಲ್ಲಿ ಪರಿಹಾರ ಬಿಡುಗಡೆಯಲ್ಲಿ ಕೊಂಚ ತಡವಾಗುತ್ತಿದೆ.  ಮೂರ್ನಾಲ್ಕು ದಿನಗಳಲ್ಲಿ ಕೇಂದ್ರ ನೆರೆ ಪರಿಹಾರ ನೀಡುವ ನಿರೀಕ್ಷೆ ಇದೆ ಎಂದು ಸಚಿವ ಆರ್. ಅಶೋಕ್ ಕೇಂದ್ರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. 

"