Asianet Suvarna News Asianet Suvarna News

ಶೀಘ್ರ ಪೊಲೀಸ್‌ ವೇತನ ಹೆಚ್ಚಳ : ಡಿಜಿಪಿ ನೀಲಮಣಿ ರಾಜು ಭರವಸೆ

ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ.ಎನ್‌.ರಾಜು ಅವರು, 3-4 ದಿನದಲ್ಲಿ ಪರಿಷ್ಕೃತ ವೇತನ ಜಾರಿಯಾಗಲಿದೆ ಎಂದು ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ. 

Soon Police Pay Hike Say DGP Neelamani Raju
Author
Bengaluru, First Published Sep 19, 2019, 7:41 AM IST
  • Facebook
  • Twitter
  • Whatsapp

ಬೆಂಗಳೂರು [ಸೆ.19]:  ವೇತನ ಪರಿಷ್ಕರಣೆ ತಡೆಹಿಡಿದ ವಿಚಾರವಾಗಿ ಪೊಲೀಸರಿಂದ ತೀವ್ರ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ.ಎನ್‌.ರಾಜು ಅವರು, 3-4 ದಿನದಲ್ಲಿ ಪರಿಷ್ಕೃತ ವೇತನ ಜಾರಿಯಾಗಲಿದೆ ಎಂದು ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ. 

ಸೆ.13ರಂದು ಐಪಿಎಸ್‌ ಅಧಿಕಾರಿ ರಾಘವೇಂದ್ರ ಎಚ್‌.ಔರಾದ್ಕರ್‌ ವರದಿಯನ್ವಯ ಪರಿಷ್ಕರಣೆ ಮಾಡಲಾಗಿದ್ದ ಪೊಲೀಸರ ವೇತನ ಜಾರಿಗೆ ಮಂಗಳವಾರ ಡಿಜಿಪಿ ತಾತ್ಕಾಲಿಕ ತಡೆ ನೀಡಿದ್ದರು. ಇದಕ್ಕೆ ಪೊಲೀಸರು ಅಸಂತೋಷಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಡಿಜಿಪಿ, ಇದೇ ತಿಂಗಳಲ್ಲಿ ಹೊಸ ವೇತನ ಸಿಗಲಿದೆ ಎಂದು ಸಿಬ್ಬಂದಿಗೆ ಭರವಸೆ ನೀಡಿದ್ದಾರೆ.

ಪೊಲೀಸ್‌ ಅಧಿಕಾರಿಗಳ ವೇತನ ಪರಿಷ್ಕರಣೆ ಲೆಕ್ಕಾಚಾರವು ಸರ್ಕಾರದ ಹಂತದಲ್ಲೇ 3-4 ದಿನದೊಳಗಾಗಿ ಇತ್ಯರ್ಥವಾಗಲಿದ್ದು, ಪರಿಷ್ಕೃತ ವೇತವನ್ನು ಸೆಪ್ಟೆಂಬರ್‌ ತಿಂಗಳಲ್ಲೇ ಡ್ರಾ ಮಾಡಲು ಸಾಧ್ಯವಾಗುವಂತೆ ಪೊಲೀಸರಿಗೆ ನೀಡಲು ಉದ್ದೇಶಿಸಲಾಗಿದೆ. ಈ ಕುರಿತು 3-4 ದಿನಗಳಲ್ಲಿ ಪೊಲೀಸರಿಗೆ ಆಯಾ ಘಟಕಗಳ ಮುಖ್ಯಸ್ಥರು ಸಂವಹನ ನಡೆಸಲಿದ್ದಾರೆ ಎಂದು ಡಿಜಿಪಿ ಸುತ್ತೋಲೆಯಲ್ಲಿ ಹೇಳಿದ್ದಾರೆ.

Follow Us:
Download App:
  • android
  • ios