ಬೆಂಗಳೂರು :  ಶೀಘ್ರದಲ್ಲೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಯಡಿಯೂರಪ್ಪ ಅವರು ಸಿಎಂ ಆಗುವುದು ಶತಸಿದ್ಧ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಹೇಳಿದ್ದಾರೆ. 

ಇದೇ ವೇಳೆ ರೇಣುಕಾಚಾರ್ಯ ಅವರು ಮೈತ್ರಿ ಸರ್ಕಾರ ಪತನವಾಗಲಿದೆಯೆಂದು ರಕ್ತದಲ್ಲಿ ನಾನು ಬರೆದು ಕೊಡುತ್ತೇನೆ ಎಂದಿದ್ದಾರೆ. 

ಒಂದು ವೇಳೆ ಸಮ್ಮಿಶ್ರ ಸರ್ಕಾರ ಬೀಳದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದೂ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. 

ಬಿಎಸ್‌ವೈ ಸಿಎಂ ಶತಸಿದ್ಧ: ರಾಜ್ಯದಲ್ಲಿ ಜನರು  ತಿರಸ್ಕರಿಸಿದ ಸಮ್ಮಿಶ್ರ ಸರ್ಕಾರ ಎರಡು ಕುಟುಂಬದ ಸರ್ಕಾರವಾಗಿದೆ ಎಂದು ಅಭಿಪ್ರಾಯಪಟ್ಟ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು, ಅತೀ ಶೀಘ್ರದಲ್ಲಿ ಮೈತ್ರಿ ಪಕ್ಷದ ನಾಯಕರ ವೈಮನಸ್ಸಿನಿಂದ ಸರ್ಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಶತಃಸಿದ್ಧ ಎಂದರು.