ಸೋನು ನಿಗಮ್'ಗೆ ಮೂಲಭೂತವಾದಿಗಳಿಂದ ಜೀವ ಬೆದರಿಕೆ; ನಿವಾಸದ ಸುತ್ತ ಬಿಗಿ ಭದ್ರತೆ

Sonu Nigam receives death threats from fundamentalist groups
Highlights

ಖ್ಯಾತ ಗಾಯಕ ಸೋನು ನಿಗಮ್‌ರನ್ನು ಹತ್ಯೆ ಮಾಡುವುದಾಗಿ ಮೂಲಭೂತವಾದಿಗಳ ಗುಂಪೊಂದು ಜೀವ ಬೆದರಿಕೆ ಹಾಕಿದೆ. ಹೀಗಾಗಿ ಸೋನು ನಿಗಮ್​​ ನಿವಾಸಕ್ಕೆ ಭದ್ರತೆ ಹೆಚ್ಚಿಸಿಸಲಾಗಿದೆ ಅಂತ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು (ಫೆ.06): ಖ್ಯಾತ ಗಾಯಕ ಸೋನು ನಿಗಮ್‌ರನ್ನು ಹತ್ಯೆ ಮಾಡುವುದಾಗಿ ಮೂಲಭೂತವಾದಿಗಳ ಗುಂಪೊಂದು ಜೀವ ಬೆದರಿಕೆ ಹಾಕಿದೆ. ಹೀಗಾಗಿ ಸೋನು ನಿಗಮ್​​ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ ಅಂತ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಈ ವಿಚಾರದಲ್ಲಿ ಮಹಾರಾಷ್ಟ್ರ ಗುಪ್ತಚರ ಇಲಾಖೆ ಮುಂಬೈ ಪೊಲೀಸರನ್ನು ಎಚ್ಚರಿಸಿತ್ತು. ಈ ಹಿಂದೆ ಮಸೀದಿಗಳಲ್ಲಿ ಮೊಳಗುವ ಆಜಾನ್ ವಿರುದ್ಧ ಸೋನು ಕಿಡಿಕಾರಿದ್ದರು. ನಾನು ಮುಸ್ಲಿಮನಲ್ಲ. ಆದರೂ, ಮಸೀದಿ ಧ್ವನಿ ವರ್ಧಕದ ಶಬ್ದದಿಂದಲೇ ಎಚ್ಚರಗೊಳ್ಳುತ್ತೇನೆ. ಧಾರ್ಮಿಕತೆಯ ಬಲವಂತದ ಹೇರಿಕೆ ಗೂಂಡಾಗಿರಿ ಎಂದು ಸೋನು ನಿಗಮ್‌ ಟ್ವೀಟ್‌ ಮಾಡಿದ್ದರು. ಆಗ ಸೋನು ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿತ್ತು. ಅವರ ನಿವಾಸ ಹೊರಗೆ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಇದೀಗ ಮತ್ತೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಭದ್ರತೆಯನ್ನು ನೀಡಲಾಗಿದೆ.

ಮೂಲಭೂತವಾದಿಗಳ ತಂಡವೊಂದು ಸೋನು ಅವರನ್ನು ಗುರಿಯಾಗಿಸಿಕೊಂಡು ಅವರನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದೆ. ಅದು ಸಾರ್ವಜನಿಕ ಸ್ಥಳದಲ್ಲಾಗಿರಬಹುದು, ಅಥವಾ ಯಾವುದಾದರೂ ಕಾರ್ಯಕ್ರಮ, ಪ್ರಚಾರ ಕಾರ್ಯದಲ್ಲಿ ಆಗಿರಬಹುದು ಎಂಬ ಮಾಹಿತಿ ಇರುವುದಾಗಿ ಗುಪ್ತಚರ ಇಲಾಖೆ ತಿಳಿಸಿದೆ.

loader