ಇಂದಿರಾರಿಂದ ರಾಜಕೀಯ ಬಲಾತ್ಕಾರ: ಬಾಯ್ತಪ್ಪಿ ಸೋನಿಯಾ ಎಡವಟ್ಟು!

First Published 18, Mar 2018, 8:04 AM IST
Soniya Gandhi Talk About Indira Gandhi Politics
Highlights

ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ತಮ್ಮ ಅತ್ತೆ ಇಂದಿರಾರನ್ನು ಹೊಗಳುವ ಭರದಲ್ಲಿ ಬಾಯ್ತಪ್ಪಿ ಆಡಿದ ಮಾತೊಂದು ಇದೀಗ ಭಾರೀ ವೈರಲ್‌ ಆಗಿದೆ.

ನವದೆಹಲಿ: ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ತಮ್ಮ ಅತ್ತೆ ಇಂದಿರಾರನ್ನು ಹೊಗಳುವ ಭರದಲ್ಲಿ ಬಾಯ್ತಪ್ಪಿ ಆಡಿದ ಮಾತೊಂದು ಇದೀಗ ಭಾರೀ ವೈರಲ್‌ ಆಗಿದೆ.

ಸೋನಿಯಾ ತಮ್ಮ ಭಾಷಣದ ವೇಳೆ ‘ಚಾಲೀಸ್‌ ವಷ್‌ರ್‍ ಪಹಲೇ ಚಿಕ್ಕಮಗಳೂರ್‌ ಮೇ ಇಂದಿರಾಜೀ ಕೀ ಶಾನ್‌ದಾರ್‌ ಜೀತ್‌ ನೇ, ದೇಶ್‌ಕಿ ರಾಜ್‌ನೀತಿ ಕೋ ಬಲಾತ್ಕಾರ್‌ (ಬರ್ಕರಾರ್‌ ಎನ್ನುವ ಬದಲು ಬಲಾತ್ಕಾರ) ರಕ್‌ದಿಯಾ’ ಎಂದು ಹೇಳಿದರು.

ಬರ್ಕರಾರ್‌ (ಕಾದಿಡುವುದು) ಎಂಬ ಪದ ಬಳಕೆಯ ಬದಲು ಬಲತ್ಕಾರ್‌ ಎಂಬ ಪದ ಬಳಸಿದ್ದರಿಂದ ಅವರ ಭಾಷಣ ‘40 ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಇಂದಿರಾಜೀ ಅವರ ಅದ್ಭುತ ಗೆಲುವು ದೇಶದ ರಾಜಕೀಯ ವ್ಯವಸ್ಥೆಯ ಮೇಲೆ ಬಲಾತ್ಕಾರ ಮಾಡಿತು’ ಎಂಬ ಅರ್ಥ ಕೊಟ್ಟಿತು.

loader