ತಾಯಿಯೇ ಮಗನ ಹತ್ಯೆ ಮಾಡಿರುವ ಘಟನೆ  ಬೆಂಗಳೂರಿನ ಜೆಜೆನಗರದಲ್ಲಿ ನಡೆದಿದೆ. ಗಾಂಜಾಗೆ ದಾಸನಾಗಿದ್ದ ಮಗ ರಮೇಶ್ ಎಂಬುವವರೇ ತಾಯಿಯಿಂದ ಹತ್ಯೆಯಾದ ವ್ಯಕ್ತಿ.

ಬೆಂಗಳೂರು(ಆ.19): ತಾಯಿಯೇ ಮಗನ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆನಗರದಲ್ಲಿ ನಡೆದಿದೆ. ಗಾಂಜಾಗೆ ದಾಸನಾಗಿದ್ದ ಮಗ ರಮೇಶ್ ಎಂಬುವವರೇ ತಾಯಿಯಿಂದ ಹತ್ಯೆಯಾದ ವ್ಯಕ್ತಿ.

ಮಗ ರಮೇಶ್ ಗಾಂಜಾಗೆ ಅಡಿಕ್ಟ್ ಆಗಿದ್ದು, ಪ್ರತಿ ದಿನಾ ಗಾಂಜಾ ತಾಯಿಯಿಂದ ಸೇದಲು ಹಣವನ್ನು ಕೇಳುತ್ತಿದ್ದ, ಹಣ ಸಿಗದೇ ಇದ್ದಾಗ ಕಳ್ಳತನ ಮಾಡುವುದು, ಸಿಕ್ಕ ಹಣದಲ್ಲಿ ಗಾಂಜಾ ಹೊಡೆಯುವುದು ಇವನ ಪ್ರತಿದಿನದ ಕಯಾಲಿ ಆಗಿತ್ತು. ಹೀಗೆ ಪ್ರತಿ ದಿನ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ರಮೇಶ್ ಇಂದು ಕೂಡಾ ಗಾಂಜಾ ಸೇದಲು ಹಣ ಬೇಕು ಎಂದು ತಾಯಿಯ ಬಳಿ ಬೇಡಿಕೆ ಇಟ್ಟು ಗಲಾಟೆ ಮಾಡಿದ್ದಾನೆ, ಪ್ರತಿದಿನದ ಇವನ ಈ ವರ್ತನೆಯಿಂದ ಮನ ನೊಂದ ತಾಯಿ ಮಗನ ಉಪಟಳ ತಾಳಲಾರದೆ ಹರಿತವಾದ ವಸ್ತುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾಳೆ.