ಹೊಸ ವರ್ಷಕ್ಕೆ ವಿಭಿನ್ನ ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಇಲ್ಲೊಬ್ಬ ಮಗ ತನ್ನ ಪ್ರೀತಿಯ ಅಪ್ಪನಿಗೆ ನೀಡಿದ ಗಿಫ್ಟ್ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಉಡುಗೊರೆ ನೋಡಿದ ತಂದೆ ಅದೆಷ್ಟು ಭಾವುಕರಾಗಿದ್ದಾರೆ. ಮಗನನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಷ್ಟಕ್ಕೂ ಮಗ ಕೊಟ್ಟ ಆ ಉಡುಗೊರೆ ಏನು? ನೀವೇ ನೋಡಿ

ಮುದ್ದಿನಿಂದ ಸಾಕಿದ ಮಗ, ದೊಡ್ಡವನಾಗಿ ಉದ್ಯೋಗಕ್ಕೆ ಸೇರಿ ತನ್ನ ಪ್ರೀತಿಯ ಅಪ್ಪನಿಗೆ ಉಡುಗೊರೆ ನೀಡುತ್ತಾನೆಂದಾದರೆ ಆ ಕ್ಷಣ ಪ್ರತಿಯೊಬ್ಬರನ್ನೂ ಭಾವುಕರನ್ನಾಗಿಸುತ್ತದೆ. ಅಪ್ಪನ ಕಣ್ತುಂಬಿ ಬರುವುದಲ್ಲಿ ಅನುಮಾನವಿಲ್ಲ. ಜೀವಮಾನವಿಡೀ ದುಡಿದ ಹಣವನ್ನು ಮಕ್ಕಳಿಗಾಗಿ ವ್ಯಯಿಸಿ, ಅವರು ದೊಡ್ಡವರಾಗಿ ತನ್ನ ಕನಸನ್ನು ಸಾಕಾರಗೊಳಿಸದರೆ ಅದಕ್ಕಿಂತ ದೊಡ್ಡ ಖುಷಿ ಬೇರೆ ಸಿಗುವುದಿಲ್ಲ. ಹೌದು ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಸಲುವಾಗಿ, ಅವರು ಉನ್ನತ ಸ್ಥಾನಕ್ಕೇರಬೇಕೆಂಬ ನಿಟ್ಟಿನಲ್ಲಿ ತಮ್ಮ ಇಚ್ಛೆಗಳನ್ನು ಮರೆತು ಬಿಡುತ್ತಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ಮಲೇಷ್ಯಾದ ಕಲುವಾಂಗ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಇದಕ್ಕೆ ಉತ್ತಮ ಉದಾಹರಣೆಯಂತಿದೆ. ಇಲ್ಲೊಬ್ಬ ಮಗ ತನ್ನ ತಂದೆಗೆ ನ್ಯೂ ಇಯರ್ ಸಂದರ್ಭದಲ್ಲಿ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ. ಈ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಿಸಲಾಗಿದ್ದು, ತಂದೆಯ ಮುಖದಲ್ಲಿ ಕಂಡು ಬಂದ ಭಾವನೆ ಎ್ಲಲರನ್ನೂ ಭಾವುಕರನ್ನಾಗಿಸುತ್ತದೆ.

ಮೊದಲಿಗೆ ತಂದೆಗೆ ಏನಾಗುತ್ತಿದೆ ಎಂದು ಅರ್ಥವೇ ಆಗುವುದಿಲ್ಲ. ಆದರೆ ಯವಾಗ ಮಗ ತನ್ನ ಬಳಿ ಬಂದು ಕಾರಿನ ಕೀ ನೀಡುತ್ತಾನೋ ಆ ವೇಳೆ, ಭಾವುಕರಾಗಿ ಅತ್ತು ಬಿಡುತ್ತಾರೆ.