ಅನಾರೋಗ್ಯಕ್ಕೆ ಒಳಗಾಗಿದ್ದ ಹೆತ್ತ ತಾಯಿಯನ್ನೇ ಮಗ ತಾನು ವಾಸಿಸುವ ಅಪಾರ್ಟ್’ಮೆಂಟ್’ನಿಂದ ಕೆಳಕ್ಕೆ ತಳ್ಳಿ ಹತ್ಯೆ ಮಾಡಿರುವ ಘಟನೆಯೊಂದು ರಾಜ್’ಕೋಟ್’ನಲ್ಲಿ ಬೆಳಕಿಗೆ ಬಂದಿದೆ.  

ರಾಜ್’ಕೋಟ್ (ಜ.05): ಅನಾರೋಗ್ಯಕ್ಕೆ ಒಳಗಾಗಿದ್ದ ಹೆತ್ತ ತಾಯಿಯನ್ನೇ ಮಗ ತಾನು ವಾಸಿಸುವ ಅಪಾರ್ಟ್’ಮೆಂಟ್’ನಿಂದ ಕೆಳಕ್ಕೆ ತಳ್ಳಿ ಹತ್ಯೆ ಮಾಡಿರುವ ಘಟನೆಯೊಂದು ರಾಜ್’ಕೋಟ್’ನಲ್ಲಿ ಬೆಳಕಿಗೆ ಬಂದಿದೆ.

ಆದರೆ ಈ ಬಗ್ಗೆ ದೂರು ನೀಡಿದ್ದ ಮಗ ಸಂದೀಪ್ ನೀರು ಕುಡಿಯಲು ತೆರಳಿದ ತಾಯಿ ಕೆಳಕ್ಕೆ ಬಿದ್ದಿದ್ದಾರೆ ಎಂದು ಹೇಳಿದ್ದರು. 

ಆದರೆ ತಾಯಿಯನ್ನು ಮನೆಯ ಒಳಗಿಂದ ಎಳೆದು ತಂದು ಕೆಳಕ್ಕೆ ಎಸೆದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರಿಂದ ಮಗನೇ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎನ್ನುವುದು ತಿಳಿದು ಬಂದಿದೆ. 

ಈತ ರಾಜ್’ಕೋಟ್ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ ಬಳಿಕ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಂದೀಪ್ ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಬಂಧಿಸಲಾಗುವುದು ಎಂದು ರಾಜ್’ಕೋಟ್ ಪೊಲೀಸರು ಹೇಳಿದ್ದಾರೆ.