ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್'ನ ಸೋಮನಾಥ್ ದೇಗುಲಕ್ಕೆ ಭೇಟಿ ನೀಡಿ ವಿಸಿಟರ್ ಪುಸ್ತಕದಲ್ಲಿ ಹಿಂದೂಯೇತರ ಎಂದು ಸಹಿ ಮಾಡಿ ಚರ್ಚಾಸ್ಪದವಾಗಿದ್ದಾರೆ.
ಗುಜರಾತ್ (ನ.29): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್'ನ ಸೋಮನಾಥ್ ದೇಗುಲಕ್ಕೆ ಭೇಟಿ ನೀಡಿ ವಿಸಿಟರ್ ಪುಸ್ತಕದಲ್ಲಿ ಹಿಂದೂಯೇತರ ಎಂದು ಸಹಿ ಮಾಡಿ ಚರ್ಚಾಸ್ಪದವಾಗಿದ್ದಾರೆ.
ಈ ಬಗ್ಗೆ ದೇವಸ್ಥಾನದ ಕಾರ್ಯದರ್ಶಿ ಪ್ರವೀಣ್ ಲಹೇರಿ ಮಾತನಾಡಿ, ಹಿಂದೂಯೇತರರು ದೇವಸ್ಥಾನಕ್ಕೆ ಬಂದರೆ ರಿಜಿಸ್ಟರ್ ಬುಕ್'ನಲ್ಲಿ ತಮ್ಮ ಹೆಸರನ್ನು ನಮೂದಿಸಬೇಕೆನ್ನುವ ನಿಯಮ ಇಲ್ಲಿದೆ. ಕೆಲವರು ತಮ್ಮ ಹೆರಸನ್ನು ಬರೆಯದೇ ಅಹ್ಮದ್ ಪಟೇಲ್, ರಾಹುಲ್ ಗಾಂಧಿ ಹೆಸರನ್ನು ಬರೆಯುತ್ತಾರೆ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಏನೂ ಮಾಡುವುದಕ್ಕಾಗುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂಯೇತರರಿಗೆ ದೇವಸ್ಥಾನ ಪ್ರವೇಶವನ್ನು ನಿಷೇಧಿಸಲಾಗಿದೆ. ಒಂದು ವೇಳೆ ಅವರು ದೇವಸ್ಥಾನದ ಒಳಗೆ ಬರಬೇಕಾದರೆ ಆಡಳಿತ ಮಂಡಳಿಯಿಂದ ವಿಶೇಷ ಅನುಮತಿ ತೆಗೆದುಕೊಂಡು ಬರಬೇಕು ಎಂದು ಪ್ರವೀಣ್ ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಹಿಂದೂಯೇತರ ಎಂದು ಸಹಿ ಮಾಡಿಲ್ಲ. ಇದು ಬೇರೆ ಯಾರೋ ಮಾಡಿರುವಂತದ್ದು. ತಮ್ಮ ಸಹಿಯಲ್ಲಿ ರಾಹುಲ್ ಗಾಂಧೀಜಿ ಎಂದು ಬರೆದಿದ್ದಾರೆ. ಸ್ವತಃ ರಾಹುಲ್ ತಮ್ಮ ಹೆಸರಿನ ಮುಂದೆ ಜಿ ಎಂದು ಯಾಕೆ ಬರೆಯುತ್ತಾರೆ. ಬಿಜೆಪಿ ವಿಷಯಾಂತರ ಮಾಡುತ್ತಿದೆ. ಇದು ಸುಳ್ಳು ಸುದ್ದಿ. ರಾಹುಲ್ ಗಾಂಧಿ ಶಿವಭಕ್ತರಾಗಿದ್ದು, ಸತ್ಯದಲ್ಲಿ ನಂಬಿಕೆಯಿಟ್ಟಿದ್ದಾರೆ. ಇವೆಲ್ಲಾ ಬಿಜೆಪಿ ಆರೋಪವಷ್ಟೇ ಎಂದು ಕಾಂಗ್ರೆಸ್ ವಕ್ತಾರ ದೀಪೇಂದ್ರ ಸಿಂಗ್ ಹೂಡಾ ಹೇಳಿದ್ದಾರೆ.
