ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಯವರ ಅವಹೇಳನಗೈದು, ಹತ್ಯೆ ಬಗ್ಗೆ ಸಂದೇಶ ಹಾಕಿದ ಚಿಕ್ಕಮಗಳೂರು ಮೂಲದ ಮಹಿಳೆ ವಿರುದ್ಧ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಚಾಲಕರು ಬೃಹನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
ಉಳ್ಳಾಲ (ಜೂ.10): ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಯವರ ಅವಹೇಳನಗೈದು, ಹತ್ಯೆ ಬಗ್ಗೆ ಸಂದೇಶ ಹಾಕಿದ ಚಿಕ್ಕಮಗಳೂರು ಮೂಲದ ಮಹಿಳೆ ವಿರುದ್ಧ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಚಾಲಕರು ಬೃಹನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
ಚಿಕ್ಕಮಗಳೂರು ಮೂಲದ, ಪ್ರಸ್ತುತ ಪುಣೆ ನಿವಾಸಿ ಸವಿತಾ ಲ್ಯಾನ್ಸಿ ಡಿ’ಸೋಜಾ ವಿರುದ್ಧ ತೊಕ್ಕೊಟ್ಟು ಕೃಷ್ಣನಗರ ನಿವಾಸಿ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಚಾಲಕ ಅಜಿತ್ ಕುಮಾರ್ ಉಳ್ಳಾಲ್ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಆಂಗ್ಲ ಪತ್ರಿಕೆಯೊಂದರಲ್ಲಿ 2023 ರ ವೇಳೆಗೆ ಭಾರತವನ್ನು ಹಿಂದೂ ದೇಶವಾಗಿ ಪರಿವರ್ತಿಸುವ ಸಂಬಂಧ ಗುಜರಾತ್‌ನಲ್ಲಿ ರೂಪರೇಷೆ ತಯಾರಾಗುತ್ತಿದೆ ಎಂದು ಪ್ರಕಟವಾದ ವರದಿಯೊಂದನ್ನು ಫೇಸ್‌ಬುಕ್‌ನ ‘ಕೊಂಕಣ್ ತಾರಾ’ ಗುಂಪಿಗೆ ಜುಡಿತ್ ಲೇವಿಸ್ ಶುಕ್ರವಾರ ಹಂಚಿಕೊಂಡಿದ್ದರು. ಗ್ರೂಪ್‌ನ ಸದಸ್ಯೆ ಸವಿತಾ ಲ್ಯಾನ್ಸಿ ಡಿ’ಸೋಜಾ ಪ್ರಧಾನಿ ನರೇಂದ್ರ ಮೋದಿ ಕುರಿತು, ‘ಮೋದಿ ಕುತ್ತೆ (ನಾಯಿ) ಎಂದು ಉಲ್ಲೇಖಿಸಿ, ಇನ್ನು ಎರಡು ವರ್ಷ ನಿಮ್ಮ ಅಧಿಕಾರ. ಅದರೊಳಗೆ ಯಾರಾದರೂ ನಿಮ್ಮನ್ನು ಬಾಂಬ್ ಸ್ಫೋಟಿಸಿ ಕೊಲ್ಲುತ್ತಾರೆ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ತನ್ನ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಸವಿತಾ, ಅಜಿತ್ ಕುಮಾರ್ ಅವರ ಫೇಸ್‌ಬುಕ್ ಇನ್‌ಬಾಕ್ಸ್‌ಗೆ ಸಂದೇಶ ರವಾನಿಸಿ ಕ್ಷಮಾಪಣೆ ಕೋರಿದ್ದಾರೆ.
