ಅಂತಾರಾಷ್ಟ್ರೀಯ ಕಂಪನಿಯ ಬದಲು ಸ್ಥಳೀಯ ತಂಪು ಪಾನೀಯಗಳನ್ನು ಉತ್ತೇಜಿಸಲು ವ್ಯಾಪಾರಸ್ಥರು ಮುಂದಾಗಿದ್ದಾರೆ.
ತಿರುವನಂತಪುರ(ಮಾ.09): ತಮಿಳುನಾಡಿನ ಬಳಿಕ ಈಗ ಕೇರಳದಲ್ಲೂ ಕೊಕಾಕೋಲಾ ಮತ್ತು ಪೆಪ್ಸಿಗೆ ಸಂಕಷ್ಟ ಎದುರಾಗಿದೆ. ಮಾ.14ರಿಂದ ಕೊಕಾಕೋಲಾ ಮತ್ತು ಪೆಪ್ಸಿ ತಂಪು ಪಾನೀಯಗಳ ಮಾರಾಟ ಸ್ಥಗಿತಗೊಳಿಸುತ್ತಿರುವುದಾಗಿ ಕೇರಳದ ಹಲವಾರು ವ್ಯಾಪಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕಂಪನಿಯ ಬದಲು ಸ್ಥಳೀಯ ತಂಪು ಪಾನೀಯಗಳನ್ನು ಉತ್ತೇಜಿಸಲು ವ್ಯಾಪಾರಸ್ಥರು ಮುಂದಾಗಿದ್ದಾರೆ.
ಬರದ ಹಿನ್ನೆಲೆಯಲ್ಲಿ ಅಂತರ್ಜಲ ಬಳಕೆ ನಿಯಂತ್ರಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲಿದೆ. ಸಾಧ್ಯವಾದರೆ, ಪಾಲಕ್ಕಾಡ್'ನಲ್ಲಿರುವ ಪೆಪ್ಸಿ ತಯಾರಿಕಾ ಘಟಕ ಅಂತರ್ಜಲ ಉಪಯೋಗಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಕೇರಳ ಜಲಸಂಪನ್ಮೂಲ ಸಚಿವ ಮ್ಯಾಥ್ಯು ಟಿ.ಥಾಮಸ್ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಅಂತರ್ಜಲ ಸಮಸ್ಯೆಯಿಂದಾಗಿ ತಮಿಳುನಾಡಿನ ವ್ಯಾಪಾರಿ ಸಂಘಟನೆಗಳು ಮಾ.1ರಿಂದ ಕೊಕಕೋಲಾ ಮತ್ತು ಪೆಪ್ಸಿ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.
