ರಾಜ್ಯದ 224 ಕ್ಷೇತ್ರಗಳಷ್ಟೇ ಅಲ್ಲ, 448 ಕ್ಷೇತ್ರಕ್ಕೆ ಬೇಕಾದರೂ ಸ್ಪರ್ಧಿಸುವ, ಗೆಲ್ಲುವ ಸಾಮರ್ಥ್ಯವಿರುವ ಮುಖಂಡರ ಪಡೆಯೇ ನಮ್ಮಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ರಾಜ್ಯದ 224 ಕ್ಷೇತ್ರಗಳಷ್ಟೇ ಅಲ್ಲ, 448 ಕ್ಷೇತ್ರಕ್ಕೆ ಬೇಕಾದರೂ ಸ್ಪರ್ಧಿಸುವ, ಗೆಲ್ಲುವ ಸಾಮರ್ಥ್ಯವಿರುವ ಮುಖಂಡರ ಪಡೆಯೇ ನಮ್ಮಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚನ್ನಗಿರಿ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಅಭ್ಯರ್ಥಿಗಳ ತೀವ್ರ ಕೊರತೆ ಇದ್ದು, ಈ ಕಾರಣಕ್ಕೆ ಅನ್ಯ ಪಕ್ಷಗಳ ಮುಖಂಡರು ಬಿಜೆಪಿ ಸೇರುತ್ತಾರೆಂಬ ಸುಳ್ಳು ವದಂತಿ ಹರಡುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಯಾರೂ ಬಿಜೆಪಿಗೆ ಹೋಗಲ್ಲ. ಬಿಜೆಪಿಯ ಅನೇಕ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಮುಖಂಡರು, ಬ್ಲಾಕ್ ಕಮಿಟಿ ಅಧ್ಯಕ್ಷರ ಅಭಿಪ್ರಾಯ ಪಡೆದು ಉತ್ತಮರಿಗೆ ಟಿಕೆಟ್ ನೀಡಲಾಗುವುದು.
ಫೆಬ್ರವರಿ ಅಂತ್ಯಕ್ಕೆ ಬಜೆಟ್ ಮಂಡಿಸುವ ಆಲೋಚನೆ ಇದೆ ಎಂದರು. ದಾವಣಗೆರೆಯಲ್ಲಿ ನಡೆಸಲುದ್ದೇಶಿಸಿರುವ ವಿಶ್ವ ಕನ್ನಡ ಸಮ್ಮೇಳನದ ಸಭೆಯನ್ನು ಡಿಸೆಂಬರ್ ನಲ್ಲಿ ನಡೆಸಬೇಕಿತ್ತು. ಆದರೆ, ನ.24ರಿಂದ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ಆರಂಭಗೊಳ್ಳಲಿದ್ದು, ಸಮ್ಮೇಳನದ ನಂತರ ವಿಶ್ವ ಕನ್ನಡ ಸಮ್ಮೇಳನದ ಕುರಿತು ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
