ನಾವು ಗಡಿಯಲ್ಲಿ ಕಾಯುತ್ತಿದ್ದರೂ ಇಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವವರನ್ನ ಗನ್ನಿನಿಂದ ಸುಟ್ಟು ಬಿಡಬೇಕೆಂಬ ಕೋಪ ಬರುತ್ತೆ. ನಾವು ದೇಶಕ್ಕೆ ಪ್ರಾಣ ಅರ್ಪಿಸಿದರೂ ಲೆಕ್ಕಕ್ಕಿಲ್ಲ ಎಂಬುದು ಬೇಸರವಾಗುತ್ತೆ. ಆದರೂ, ನಮ್ಮ ದೇಶದ ಜನ ಎಂಬ ಅಭಿಮಾನದಿಂದ ಪ್ರಾಣವನ್ನ ಪಣಕ್ಕಿಟ್ಟು ಹೋರಾಡುತ್ತೇವೆ.

ಜಮ್ಮು ಹೊರವಲಯದ ನಗ್ರೋಟಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧ ಅಕ್ಷಯ್ ಸಾವಿಗೆ ಪ್ರತಿಯಾಗಿ 10 ಉಗ್ರರ ಬಲಿ ಪಡೆಯುತ್ತೇವೆ ಎಂದು ದಾವಣಗೆರೆ ಮೂಲದ ಯೋಧ ರಮೇಶ್ ಹೇಳಿದ್ದಾರೆ.

ಅಸ್ಸಾಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕದ ಮತ್ತೊಬ್ಬ ಯೋಧ ಹವಾಲ್ದರ್ ವಸಂತ್ ದೇವನೂರು ಸಹ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

`ನಾವು ಅಂತಹ ತಂದೆ ತಾಯಿ ಹೊಟ್ಟೆಯಲ್ಲಿ ಹುಟ್ಟಲು ಹೆಮ್ಮೆಪಡುತ್ತೇವೆ. ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಮಗ ನಮ್ಮ ಮುಂದೆ ಇರಬೇಕೆಂದು ಆಶಿಸುತ್ತಾರೆ. ಆದರೆ, ನಮ್ಮನ್ನ ದೆಶಸೇವೆಗೆ ಕಳುಹಿಸಿದ ನಮ್ಮ ತಂದೆ-ತಾಯಿ ಗ್ರೇಟ್.

ನಮ್ಮವರ ಕಾಯುವುದು ನಮ್ಮ ಮನಸ್ಸಿನಲ್ಲಿರುತ್ತೆ. ಎಷ್ಟೇ ಕಷ್ಟಬಂದರೂ ಕಾಲನ್ನ ಹಿಂದಿಡುವುದಿಲ್ಲ. ನಮ್ಮವರ ರಕ್ಷಣೆಯೊಂದೇ ನಮ್ಮ ಗುರಿ. ಹುತಾತ್ಮ ಯೋಧರ ಕುಟುಂಬಕ್ಕೆ ಒಳ್ಳೆಯದಾಗಲಿ.

ನಾವು ಗಡಿಯಲ್ಲಿ ಕಾಯುತ್ತಿದ್ದರೂ ಇಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವವರನ್ನ ಗನ್ನಿನಿಂದ ಸುಟ್ಟು ಬಿಡಬೇಕೆಂಬ ಕೋಪ ಬರುತ್ತೆ. ನಾವು ದೇಶಕ್ಕೆ ಪ್ರಾಣ ಅರ್ಪಿಸಿದರೂ ಲೆಕ್ಕಕ್ಕಿಲ್ಲ ಎಂಬುದು ಬೇಸರವಾಗುತ್ತೆ. ಆದರೂ, ನಮ್ಮ ದೇಶದ ಜನ ಎಂಬ ಅಭಿಮಾನದಿಂದ ಪ್ರಾಣವನ್ನ ಪಣಕ್ಕಿಟ್ಟು ಹೋರಾಡುತ್ತೇವೆ.

ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಮಾಧ್ಯಮದಲ್ಲಿ ಜನಪ್ರಿಯರಾಗಲು ದೇಶದ ವಿರುದ್ಧ ಮಾತನಾಡುತ್ತಾರೆ. ನಮ್ಮ ದೇಶದ ಬಗ್ಗೆ ಒಳ್ಳೆಯದನ್ನೇ ಹೇಳಲಿ, ನಮ್ಮ ಮನಸ್ಸಿಗೆ ನೋವುಂಟುಮಾಡಿ ಏನು ಸಾಧಿಸುತ್ತಾರೆ. ಇದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. ಅವರೆಲ್ಲರೂ ನಮ್ಮವರು ಎಂಬುದು ನಮ್ಮ ಭಾವನೆ'