ಸರ್ಜಿಕಲ್ ಸ್ಟ್ರೈಕ್ ವೀರ ಸೈನಿಕ ಹುತಾತ್ಮ! ಲಾನ್ಸ್ ನಾಯಕ ಸಂದೀಪ್ ಸಿಂಗ್ ಹುತಾತ್ಮ! ಭಯೋತ್ಪಾದಕರ ಜೊತೆಗಿನ ಸೆಣಸಾಟದಲ್ಲಿ ವೀರ ಮರಣ! ಮೂವರು ಉಗ್ರರನ್ನು ಹೊಡೆದುರುಳಿಸಿ ಪ್ರಾಣಬಿಟ್ಟ ಸೈನಿಕ   

ಶ್ರೀನಗರ(ಸೆ.25): ಭಾರತದ ಪಾಲಿಗೆ ಇಂದು ನಿಜಕ್ಕೂ ಬ್ಲ್ಯಾಕ್ ಡೇ. ಕಾರಣ ೨೦೧೬ ರಲ್ಲಿ ನಡೆದ ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ಆಪರೇಷನ್ ನಲ್ಲಿ ಪಾಲ್ಗೊಂಡಿದ್ದ ವೀರ ಯೋಧ ಲಾನ್ಸ್ ನಾಯಕ್ ಸಂದೀಪ್ ಸಿಂಗ್ ಹುತಾತ್ಮರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಭಯೋತ್ಪಾದಕರೊಡನೆ ನಡೆದ ಎನ್ ಕೌಂಟರ್ ನಲ್ಲಿ ಸಂದೀಪ್ ಸಿಂಗ್ ಹುತಾತ್ಮರಾದರು ಎಂದು ಸೇನಾ ಮೂಲಗಳು ತಿಳಿಸಿವೆ. ಆದರೆ ಕೊನೆಯುಸಿರೆಳುವುದಕ್ಕೂ ಮೊದಲು ಮೂವರು ಭಯೋತ್ಪಾದಕರನ್ನು ಸಂದೀಪ್ ಸಿಂಗ್ ಹೊಡೆದುರುಳಿಸಿದ್ದಾರೆ.

ಇಲ್ಲಿನ ಕುಪ್ವಾರಾ ಬಳಿ ನಡೆದ ಎನ್ ಕೌಂಟರ್ ನಲ್ಲಿ ತಾವೇ ಮುಂದೆ ನಿಂತು ಭಯೋತ್ಪಾದಕರನ್ನು ಮಟ್ಟ ಹಾಕುತ್ತಿದ್ದ ಸಂದೀಪ್, ಕೊಬೆಗೆ ಭಯೋತ್ಪಾದಕರ ಗುಂಡಿಗೆ ಬಲಿಯಾದರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಮೂಲತಃ ಪಂಜಾಬ್ ನವರಾದ ಸಂದೀಪ್ ಸಿಂಗ್, ಸೇನೆಯ 4 ಪ್ಯಾರಾ ಕಮಾಂಡೋಸ್ ನ ಸದಸ್ಯರಾಗಿದ್ದರು. ಸಂದೀಪ್ ಸಿಂಗ್ ಕೊನೆ ಕ್ಷಣದವರೆಗೂ ಈ ದೇಶದ ರಕ್ಷಣೆಗಾಗಿ ಹೋರಾಡಿದ ಪರಿ ಮುಂದಿನ ಪೀಳಿಗೆಗೆ ಮಾದರಿ ಎಂದು ಸೇನೆ ತನ್ನ ಸಂತಾಪ ಸೂಚನೆಯಲ್ಲಿ ತಿಳಿಸಿದೆ.