ಗ್ಯಾಂಗ’ಸ್ಟರ್ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್’ಕೌಂಟರ್ ಪ್ರಕರಣದಲ್ಲಿ ಗುಜರಾತ್’ನ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಡಿ.ಜಿ. ವಂಝಾರ ಹಾಗೂ ದಿನೇಶ್ ಎಂ.ಎನ್ ಅವರನ್ನು ವಿಶೇಷ ಸಿಬಿಐ ನ್ಯಾಯಾಲವು ಆರೋಪ ಮುಕ್ತಗೊಳಿಸಿದೆ.
ಮುಂಬೈ : ಗ್ಯಾಂಗ’ಸ್ಟರ್ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್’ಕೌಂಟರ್ ಪ್ರಕರಣದಲ್ಲಿ ಗುಜರಾತ್’ನ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಡಿ.ಜಿ. ವಂಝಾರ ಹಾಗೂ ದಿನೇಶ್ ಎಂ.ಎನ್ ಅವರನ್ನು ವಿಶೇಷ ಸಿಬಿಐ ನ್ಯಾಯಾಲವು ಆರೋಪ ಮುಕ್ತಗೊಳಿಸಿದೆ.
ಶೇಕ್ ನಕಲಿ ಎನ್’ಕೌಂಟರ್ ಪ್ರಕರಣದಲ್ಲಿ ಡಿಐಜಿ ಶ್ರೇಣಿ ಅಧಿಕಾರಿಯಾಗಿದ್ದ ವಂಝಾರರನ್ನು ಏಪ್ರಿಲ್ 2007ರಲ್ಲಿ ಬಂಧಿಸಲಾಗಿತ್ತು. ಅವರ ಜೊತೆ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳಾದ ರಾಜಕುಮಾರ್ ಪಾಂಡ್ಯನ್ ಹಾಗೂ ದಿನೇಶ್ ಎಂ.ಎನ್ ಅವರನ್ನು ಬಂಧಿಸಲಾಗಿತ್ತು. ಪಾಂಡ್ಯನ್ ಅವರನ್ನು ಈ ಹಿಂದಯೇ ಸಿಬಿಐ ನ್ಯಾಯಾಲಯವು ದೋಷಮುಕ್ತಗೊಳಿಸಿತ್ತು.
ಶೇಕ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದ್ದು, ಎನ್’ಕೌಂಟರ್ ನಕಲಿಯಾಗಿತ್ತು ಎಂದು ಹೇಳಿತ್ತು. ಬಳಿಕ ಈ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.
ನವಂಬರ್ 2005ರಲ್ಲಿ ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿಯನ್ನು ಗುಜರಾತಿನ ಭಯೋತ್ಪಾದನಾ ನಿಗ್ರಹ ದಳವು ಅಪಹರಿಸಿ, ಗಾಂಧಿನಗರದ ಬಳಿ ನಕಲಿ ಎನ್’ಕೌಂಟರ್’ನಲ್ಲಿ ಹತ್ಯೆ ಮಾಡಿತ್ತು ಎಂದು ಸಿಬಿಐ ಹೇಳಿತ್ತು.
ಈ ಘಟನೆಯ ಪ್ರಮುಖ ಸಾಕ್ಷಿಯಾಗಿದ್ದ ಸೊಹ್ರಾಬುದ್ದೀನ್ ಶೇಖ್ ಸಹವರ್ತಿ ತುಳಸಿರಾಮನನ್ನು ಕೂಡಾ ಪೊಲೀಸರು 2006ರಲ್ಲಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
