Asianet Suvarna News Asianet Suvarna News

ಸೋಶಿಯಲ್ ಮೀಡಿಯಾಗೆ ಮಣಿದು ‘ಗಣೇಶ’ ಹೆಸರು ಕೈ ಬಿಟ್ಟ ಬಿಯರ್ ಕಂಪನಿ!

ಸೋಶಿಯಲ್ ಮೀಡಿಯಾ ಕೆಲವೊಮ್ಮೆ ಎಂಥ ಒತ್ತಡ ಸೃಷ್ಟಿ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಅಭಿಪ್ರಾಯ ರೂಪಣೆಯಲ್ಲಿ ಸೋಶಿಯಲ್ ಮೀಡಿಯಾ ಇಂದು ಉಳಿದೆಲ್ಲ ಮಾಧ್ಯಮಗಳಿಗಿಂತ ಎತ್ತರದ ಸ್ಥಾನದಲ್ಲಿ ನಿಂತಿದೆ. ಭಾರತದ ಸಾಮಾಜಿಕ ತಾಣದ ಒತ್ತಡಕ್ಕೆ ಇಂಗ್ಲೆಂಡಿನ ಪ್ರಮುಖ ಕಂಪನಿಯೊಂದು ಮಣಿದಿದೆ.  ಏನಪ್ಪಾ ಸುದ್ದಿ ಅಂತೀರಾ ? 

Social Media Reaction UK brewery withdraws Ganesh as name of special beer
Author
Bengaluru, First Published Oct 28, 2018, 6:33 PM IST
  • Facebook
  • Twitter
  • Whatsapp

ಬೆಂಗಳೂರು[ಅ.28] ಮದ್ಯ ತರಾರಿಕೆಯಲ್ಲಿ ಹೆಸರು ಮಾಡಿರುವ  ವಿಶಬೋನ್ ಬ್ರೂವರಿ ಬಿಯರ್ ಕಂಪನಿ ಇತ್ತೀಚೆಗೆ ತನ್ನ ಹೊಸ ಬಿಯರ್​ಗೆ 'ಗಣೇಶ' ಎಂದು ಹೆಸರಿಟ್ಟಿದ್ದು ವಿವಾದ ಹುಟ್ಟುಹಾಕಿತ್ತು. ಆದರೆ ಸೋಶಿಯಲ್ ಮೀಡಿಯಾ ಒತ್ತಡಕ್ಕೆ ಮಣಿದು ಹಿಂದಕ್ಕೆ ಪಡೆದಿದೆ.

ಮ್ಯಾಂಚೆಸ್ಟರ್​ನಲ್ಲಿ ನಡೆದ ಬಿಯರ್ ಉತ್ಸವದಲ್ಲಿ ಭಾರತೀಯ ಮದ್ಯಪಾನಿಯರನ್ನು ಆಕರ್ಷಿಸಲು ಕಂಪನಿಯು ವಿಶೇಷ ಬಿಯರ್ ತಯಾರಿಸಿತ್ತು. ನಿಂಬೆ, ಕೊತ್ತಂಬರಿ ಮತ್ತು ದ್ರಾಕ್ಷಿ ರಸವನ್ನು ಬಳಸಿ ತಯಾರಿಸಿದ್ದಕ್ಕೆ ಗಣೇಶ ಎಂಬ ಹೆಸರು ನೀಡಿದ್ದರು. ಹಿಂದೂ ದೇವರ ಹೆಸರನ್ನು ಮದ್ಯಕ್ಕೆ ಇಟ್ಟಿದ್ದಕ್ಕೆ ವ್ಯಾಪಕ ವಿರೋಧ ಎಲ್ಲಡೆಯಿಂದ ವ್ಯಕ್ತವಾಗಿತ್ತು.

ತಮಾಷೆಯಲ್ಲ ಇದು ಸುಂದರಿಯರ ಗುಪ್ತಾಂಗದಿಂದ ತಯಾರಿಸಿದ ಬಿಯರ್!

ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿರುವ ಹಿಂದೂ ಸಂಘಟನೆಗಳು ಇದನ್ನು ವಿರೋಧಿಸಿದ್ದವು. ಕಾನೂನು ಹೋರಾಟಕ್ಕೆ ಮುಂದಾಗುವ ಎಚ್ಚರಿಕೆಯನ್ನು ನೀಡಿದ್ದರು. ಇದೆಲ್ಲರ ನಡುವೆ ಸಂಸ್ಥೆ ಹೆಸರು ಕೈಬಿಟ್ಟಿದೆ.


 

Follow Us:
Download App:
  • android
  • ios