ತಾನು ಸಾಕಿದ ಹೆಬ್ಬಾವಿನಿಂದಲೇ ಮೃತಪಟ್ಟ

First Published 26, Jan 2018, 4:36 PM IST
Snake lover killed by pet 8 foot python he had since hatchling
Highlights

ಬ್ರಾಡನ್ ತನ್ನ ಮನೆಯಲ್ಲಿ 10 ಹಾವುಗಳು ಹಾಗೂ 12 ಜೇಡರ ಹುಳುಗಳನ್ನು ಸಾಕಿಕೊಂಡಿದ್ದ ಎಂದು ಮೃತಳ ತಾಯಿ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದರು.

ಲಂಡನ್(ಜ.26): ತಾನು ಸಾಕಿದ ಹೆಬ್ಬಾವಿನಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಲಂಡನ್'ನ ಪಟ್ಟಣವೊಂದರಲ್ಲಿ ನಡೆದಿದೆ.

ಡಾನ್ ಬ್ರಾಡನ್ ಕಳೆದ ವರ್ಷ ಆಗಸ್ಟ್ 2017ರಂದು ಮನೆಯಲ್ಲಿ ಮೃತಪಟ್ಟಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಭಾವಿಸಿದ್ದರು. ಆದರೆ ಆತನೇ ಸಾಕಿದ 8 ಅಡಿ ಹೆಬ್ಬಾವಿನಿಂದ ಕೊಲ್ಲಲ್'ಪಟ್ಟಿದ್ದಾನೆ' ಕೋರ್ಟ್ ತಿಳಿಸಿದೆ.

ಬ್ರಾಡನ್ ತನ್ನ ಮನೆಯಲ್ಲಿ 10 ಹಾವುಗಳು ಹಾಗೂ 12 ಜೇಡರ ಹುಳುಗಳನ್ನು ಸಾಕಿಕೊಂಡಿದ್ದ ಎಂದು ಮೃತಳ ತಾಯಿ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದರು. ವೈದ್ಯರು ಮೃತದೇಹವನ್ನು ಪರೀಕ್ಷಿಸಿದಾಗ ಅಸಹಜ ಸಾವಾಗಿರಲಿಲ್ಲ. ದೈಹಿಕನಾಗಿಯೂ ಆತ ಪ್ರಬಲನಾಗಿದ್ದು, ಹೆಬ್ಬಾವಿನಿಂದ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ವರದಿ ನೀಡಿದ್ದರು.    

loader