Asianet Suvarna News Asianet Suvarna News

ನೈಜೀರಿಯಾ ಸಂಸತ್ತಿಗೆ ಹಾವು: ಎದ್ದು ಬಿದ್ದೋಡಿದ ಸಂಸದರು!

ನೈಜೀರಿಯಾ ಸಂಸತ್ತಿಗೆ ಹಾವು ಪ್ರವೇಶ: ಬಿದ್ದೋಡಿದ ಸಂಸದರು| ಅನಿರ್ದಿಷ್ಟ ಅವಧಿಗೆ ಕಲಾಪ ಮುಂದೂಡಿಕೆ

Snake inside Nigerian parliament sends lawmakers scampering adjourn session indefinitely
Author
Bangalore, First Published Jul 27, 2019, 7:55 AM IST

ಲಾಗೋಸ್‌[ಜು.27]: ನೈಜೀರಿಯಾದ ಸಂಸತ್ತಿನ ಕಲಾಪ ನಡೆಯುವ ಕೊಠಡಿಗೆ ಹಾವೊಂದು ಬಂದಿದ್ದರಿಂದ ಸಂಸದರು ಆತಂಕದಿಂದ ಹೊರಗೆ ಓಡಿದ ಘಟನೆ ನಡೆದಿದೆ.

ನಾವು ಇನ್ನೇನು ಸಂಸತ್‌ ಭವನ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ದೊಡ್ಡ ಹಾವೊಂದು ಕೊಠಡಿಯಲ್ಲಿ ಓಡಾಡುತ್ತಿತ್ತು. ಹೀಗಾಗಿ ಹೊರಗೆ ಓಡಿ ಬಂದೆವು ಎಂದು ಸಂಸತ್‌ ಪ್ರತಿನಿಧಿಯೊಬ್ಬರು ಹೇಳಿದ್ದಾರೆ. ಕೊಠಡಿಯ ಚಾವಣಿಯಲ್ಲಿ ಸೇರಿಕೊಂಡಿದ್ದ ಹಾವು ಕೆಳಕ್ಕೆ ಬಿದ್ದಿದೆ ಎನ್ನಲಾಗಿದೆ. ಅದೃಷ್ಟವಶಾತ್‌ ಹಾವು ಯಾರಿಗೂ ಕಚ್ಚಲ್ಲ. ಬಳಿಕ ಸಂಸದರು ಹಾವನ್ನು ಹೊಡೆದು ಹತ್ಯೆ ಮಾಡಿದ್ದಾರೆ. ಹಣದ ಕೊರತೆಯಿಂದಾಗಿ ಸಂಸತ್‌ ಭವನ ನಿರ್ವಹಣೆ ಮಾಡದೇ ಇದ್ದಿದ್ದೇ ಈ ಘಟನೆಗೆ ಕಾರಣ ಎಂದು ಸಂಸದರು ಆರೋಪಿಸಿದ್ದಾರೆ. ಅಲ್ಲದೇ ಸುರಕ್ಷಿತ ಕ್ರಮಗಳನ್ನು ಕೈಗೊಳುವವರೆಗೂ ಸಂಸತ್ತಿಗೆ ಆಗಮಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಂಸತ್‌ ಕಲಾಪವನ್ನು ಅನಿರ್ದಿಷ್ಟಅವಧಿಗೆ ಮೂಂದೂಡಲಾಗಿದೆ.

ಸಂಸತ್ತಿನ ಸುತ್ತಮುತ್ತ ಹೆಗ್ಗಣ, ಹಾವು ಓಡಾಡುವುದನ್ನು ಸಂಸದರು ಕಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಸಂಸತ್ತಿನೊಳಗೆ ಬಂದಿದ್ದರಿಂದ ಅವರೆಲ್ಲಾ ಹೌಹಾರಿದ್ದಾರೆ.

ನೈಜೀರಿಯಾದಲ್ಲಿ ಮಂಡಲದ ಹಾವು, ನಾಗರಹಾವು ಸೇರಿದಂತೆ ಹಲವಾರು ವಿಷಕಾರಿ ಹಾವುಗಳಿವೆ. 1 ಲಕ್ಷ ಜನರಲ್ಲಿ 500 ಜನರು ಪ್ರತಿವರ್ಷ ಹಾವಿನ ಕಡಿತಕ್ಕೆ ಒಳಗಾಗುತ್ತಾರೆ. 8ರಲ್ಲಿ ಒಬ್ಬರು ಸಾವನ್ನಪ್ಪುತ್ತಾರೆ.

Follow Us:
Download App:
  • android
  • ios