Asianet Suvarna News Asianet Suvarna News

ಜಿಎಸ್‌ಟಿಯಿಂದ ಸಿಎಗಳಿಗೆ ಉದ್ಯೋಗ: ಸ್ಮೃತಿ ಟ್ವೀಟಿಗೆ ನೆಟ್ಟಿಗರ ಪ್ರತಿಕ್ರಿಯೆ ಏನು ಗೊತ್ತಾ?

* ಜಿಎಸ್‌ಟಿ ಜಾರಿಯಿಂದ ಸಿಎಗಳಿಗೆ ಉದ್ಯೋಗ ಎಂದ ಸ್ಮೃತಿ ಇರಾನಿ

* ನೆಟ್ಟಿಗರಿಂದ ಕಾಲೆಳೆಸಿಕೊಂಡ ಕೇಂದ್ರ ಸಚಿವೆ

Smriti Irani trolled for her tweet on GST

ಹೊಸದಿಲ್ಲಿ: ಪ್ರಧಾನಿ ನೇತೃತ್ವದ ಸರಕಾರ ಜಾರಿಗೊಳಿಸಿದ ಕ್ರಾಂತಿಕಾರಿ ಆರ್ಥಿಕ ಸುಧಾರಣಾ ಯೋಜನೆ ಸರಕು ಮತ್ತು ಸೇವಾ ತೆರಿಗೆ (GST)ಯನ್ನು ಬೆಂಬಲಿಸುವಾಗ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ, 'ಜಿಎಸ್‌ಟಿಯಿಂದ ಸಿಎಗಳಿಗೆ ಉದ್ಯೋಗ ಸೃಷ್ಟಿಯಾಗಿವೆ,' ಎಂದು ಹೇಳಿದ್ದು ಟ್ರಾಲ್‌ಗೊಳಗಾಗುವಂತಾಗಿದೆ.

Smriti Irani trolled for her tweet on GST

'ಅರ್ಥವಾಗದಂಥ ಜಿಎಸ್‌ಟಿಯನ್ನು ಜಾರಿಗೊಳಿಸಿದ ಕಾರಣದಿಂದ ಸಿಎಗಳಿಗೆ ಡಿಮ್ಯಾಂಡ್ ಹೆಚ್ಚಾಗಬಾರದಿತ್ತು,..' ಎಂದು ಸ್ಮೃತಿ ಕಾಲೆಳೆಯಲಾಗಿದೆ. 'ಭೂಕಂಪವಾದರೆ ಕಟ್ಟಡ ಕಾರ್ಮಿಕರಿಗೆ ವರವಾಗಲಿದೆ,' ಎಂದು ಹೇಳಿದಂತಿದೆ, ಸ್ಮೃತಿ ಟ್ವೀಟ್ ಎಂದಿದ್ದಾರೆ ನೆಟ್ಟಿಗರು.

'ಡೆಂಗ್ಯೂ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚಾಗುತ್ತಾರೆ,' ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು, 'ಭಯೋತ್ಪಾದಕರು ಜನರು ಕೊಂದರೆ, ಚಿತಾಗಾರದವರಿಗೆ ಕೆಲಸ ಹೆಚ್ಚಾಗುತ್ತೆ..' ಎಂದೂ ಹೇಳಿದ್ದಾರೆ.
'ಸ್ವಚ್ಛ ನೀರು ಸೀಗದೇ ಹೋದರೆ ಮಿನರಲ್ ವಾಟರ್ ವ್ಯವಹಾರ ಹೆಚ್ಚುತ್ತೆ,' ಎಂದೂ ಟೀಕಿಸಲಾಗಿದೆ. ಇಲ್ಲಿವೆ ಕೆಲವು ಟ್ವೀಟ್‌ಗಳು....

 

Follow Us:
Download App:
  • android
  • ios