ಪಕ್ಷದಲ್ಲಿ ಅವರಿಗೆ ಎಲ್ಲಾ ಸ್ಥಾನಮಾನಗಳು ಸಿಕ್ಕಿವೆ ಎಂದು ಹೇಳಿದ್ದಾರೆ. ಕೆಲವೊಂದು ವಿಚಾರಗಳಲ್ಲಿ ಅಸಮಾಧಾನವಿರಬಹುದು : ಖರ್ಗೆ

ಬೆಂಗಳೂರು (ಜ.29): ಕಾಂಗ್ರೆಸ್​ ಪಕ್ಷಕ್ಕೆ ಮಾಜಿ ಸಿಎಂ ಎಸ್.ಎಂ..ಕೃಷ್ಣ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಕೃಷ್ಣರ ನಿರ್ಧಾರ ಪಕ್ಷಕ್ಕೆ ಹೊಡೆತ ನೀಡಲಿದೆ. ಪಕ್ಷದಲ್ಲಿ ಅವರಿಗೆ ಎಲ್ಲಾ ಸ್ಥಾನಮಾನಗಳು ಸಿಕ್ಕಿವೆ ಎಂದು ಹೇಳಿದ್ದಾರೆ. ಕೆಲವೊಂದು ವಿಚಾರಗಳಲ್ಲಿ ಅಸಮಾಧಾನವಿರಬಹುದು. ಅವರ ಅಸಮಾಧಾನದ ಬಗ್ಗೆ ಸಿಎಂಗೆ ಗೊತ್ತಿರಬಹುದು. ಹೈಕಮಾಂಡ್ ಈಗಾಗಲೇ ಮನವೊಲಿಸುವ ಕೆಲಸ ಮಾಡುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನಿರ್ಧಾರ ಕೈಬಿಡಬೇಕೆಂದು ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕೊಡಗಿನಲ್ಲಿ ಪ್ರತಿಕ್ರಿಯಿಸಿದ ಡಿ.ವಿ.ಸದಾನಂದಗೌಡ, ದೇಶದ ಒಳಿತಿಗಾಗಿ ಅವರು ಪಕ್ಷದ ರಾಜೀನಾಮೆ ನೀಡಿದ್ದಾರೆ. ಬಿಜೆಪಿಗೆ ಬಂದರೆ ಖಂಡಿತ ಸ್ವಾಗತಾರ್ಹ. ಅವರ ಮನಸ್ಸಿಗೆ ಕಾಂಗ್ರೆಸ್​ ಪಕ್ಷದಿಂದ ನೋವಾಗಿದೆ. ಕಾಂಗ್ರೆಸ್​’ನಿಂದ ಹೊರಗೆ ಬಂದಿದ್ದು ಸಂತಸ ತಂದಿದೆ ಎಂದರು.