ರಾಡಾರ್‌ ಆಧಾರಿತ ಸೆನ್ಸರ್‌ ತಂತ್ರಜ್ಞಾನದಿಂದ ಪಾರ್ಕಿಂಗ್‌ ಸ್ಥಳ ನಿರ್ವಹಣೆಗೊಳ್ಳಲಿವೆ. ಇದರಿಂದ ವಾಹನ ಎಷ್ಟುಹೊತ್ತಿಗೆ ಬಂತು?, ಎಷ್ಟೊತ್ತು ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿತ್ತು? ಹಾಗೂ ಇದಕ್ಕೆ ಪಾವತಿಸಬೇಕಾದ ಶುಲ್ಕವೆಷ್ಟು? ಎಂಬುದನ್ನು ಕರಾರುವಾಕ್‌ ಆಗಿ ಮಾಹಿತಿ ದೊರೆಯುತ್ತದೆ. ಜತೆಗೆ ಪಾರ್ಕಿಂಗ್‌ ಸ್ಥಳದಲ್ಲಿ ಎಷ್ಟು ವಾಹನಗಳು ಭರ್ತಿ ಆಗಿವೆ, ಎಷ್ಟುಅವಕಾಶಗಳಿಗೆ ಇನ್ನೂ ಅವಕಾಶವಿದೆ ಎಂಬುದನ್ನು ಎಲೆಕ್ಟ್ರಾನಿಕ್‌ ಪರದೆ ಮೇಲೆ ತೋರುತ್ತದೆ.

ಬೆಂಗಳೂರು: ಇಡೀ ದೇಶದಲ್ಲೇ ಮೊದಲ ಬಾರಿಗೆ ‘ಸ್ಮಾರ್ಟ್‌ ಪಾರ್ಕಿಂಗ್‌' ವ್ಯವಸ್ಥೆ ಜಾರಿಗೊಳಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಸಜ್ಜಾಗಿದ್ದು, ಸದ್ಯದಲ್ಲೇ ನಗರದ ಆಯ್ದ 87 ಕಡೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಜಾರಿಯಾಗಲಿದೆ.
ಸಂಪೂರ್ಣ ತಂತ್ರಜ್ಞಾನ ಆಧಾರಿತ ನಿರ್ವಹಣೆ, ಸೆನ್ಸರ್‌ ಆಧಾರಿತ ಪಾರ್ಕಿಂಗ್‌, ಕ್ಯಾಶ್‌'ಲೆಸ್‌ ಪಾವತಿ ಸೇರಿದಂತೆ ಹೇಗ್‌ ಮತ್ತಿತರ ನಗರಗಳಲ್ಲಿರುವಂತಹ ಅತ್ಯಾಧುನಿಕ ಪಾರ್ಕಿಂಗ್‌ ವ್ಯವಸ್ಥೆಗೆ ಸಿದ್ಧತೆ ಪೂರ್ಣ ಗೊಂಡಿದೆ. ಈಗಾಗಲೇ ಟೆಂಡರ್‌ ಆಹ್ವಾನಿಸಿದ್ದು, 2-3 ತಿಂಗಳಲ್ಲೇ ನಗರದಲ್ಲಿ ಸುಧಾರಿತ ಪಾರ್ಕಿಂಗ್‌ ವ್ಯವಸ್ಥೆ ಬರಲಿದೆ. ಮೊದಲ ಹಂತದಲ್ಲಿ 56 ಕಡೆ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ಬರಲಿದೆ.

ರಾಡಾರ್‌ ಆಧಾರಿತ ಸೆನ್ಸರ್‌ ತಂತ್ರಜ್ಞಾನದಿಂದ ಪಾರ್ಕಿಂಗ್‌ ಸ್ಥಳ ನಿರ್ವಹಣೆಗೊಳ್ಳಲಿವೆ. ಇದರಿಂದ ವಾಹನ ಎಷ್ಟುಹೊತ್ತಿಗೆ ಬಂತು?, ಎಷ್ಟೊತ್ತು ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿತ್ತು? ಹಾಗೂ ಇದಕ್ಕೆ ಪಾವತಿಸಬೇಕಾದ ಶುಲ್ಕವೆಷ್ಟು? ಎಂಬುದನ್ನು ಕರಾರುವಾಕ್‌ ಆಗಿ ಮಾಹಿತಿ ದೊರೆಯುತ್ತದೆ. ಜತೆಗೆ ಪಾರ್ಕಿಂಗ್‌ ಸ್ಥಳದಲ್ಲಿ ಎಷ್ಟು ವಾಹನಗಳು ಭರ್ತಿ ಆಗಿವೆ, ಎಷ್ಟುಅವಕಾಶಗಳಿಗೆ ಇನ್ನೂ ಅವಕಾಶವಿದೆ ಎಂಬುದನ್ನು ಎಲೆಕ್ಟ್ರಾನಿಕ್‌ ಪರದೆ ಮೇಲೆ ತೋರುತ್ತದೆ. ವಾಹನ ಬಂದು ನಿಂತ ತಕ್ಷಣ ಸೆನ್ಸಾರ್‌ ತಂತ್ರಜ್ಞಾನದಿಂದ ಮಾಹಿತಿ ಸಂಗ್ರಹಿಸಿ ನಿರ್ವಹಣಾ ಕೊಠಡಿಗೆ ಮಾಹಿತಿ ಅಪ್‌'ಲೋಡ್‌ ಮಾಡಲಾಗುತ್ತದೆ. ವೇರಿಯೇಬಲ್‌ ಮೆಸೇಜಿಂಗ್‌ ಸಿಸ್ಟಂ (ವಿಎಂಎಸ್‌) ನಿಂದ ಡಿಜಿಟಲ್‌ ಪಾರ್ಕಿಂಗ್‌ ಮಾಹಿತಿ ಫಲಕಕ್ಕೆ ಎಷ್ಟುವಾಹನಗಳ ಪಾರ್ಕಿಂಗ್‌'ಗೆ ಇನ್ನೂ ಅವಕಾಶವಿದೆ ಎಂಬ ಅಂಶ ಕಳುಹಿಸುತ್ತದೆ. ಹೀಗೆ ಪ್ರತಿಯೊಂದು ಸ್ಮಾರ್ಟ್‌ ಆಗಿ ಕೆಲಸ ಮಾಡುತ್ತವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮೊಬೈಲ್‌'ನಲ್ಲೇ ಜಾಗದ ಬಗ್ಗೆ ಮಾಹಿತಿ: ಈ ಬಗ್ಗೆ ‘ಕನ್ನಡಪ್ರಭ' ಜತೆ ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌'ಪ್ರಸಾದ್‌, ಈ ತಾಣಗಳಲ್ಲಿ 7,500 ವಾಹನಗಳ ನಿಲುಗಡೆಗೆ ಅವಕಾಶ ಇದೆ. ತಾಣದಲ್ಲಿ ಸೆನ್ಸಾರ್‌ ಹಾಕಿ ಮೀಟರ್‌ ಅಳವಡಿಸುತ್ತೇವೆ. ವಾಹನ ಯಾವ ಸಮಯಕ್ಕೆ ಬಂತು, ಎಷ್ಟುಸಮಯ ಅಲ್ಲಿತ್ತು ಎಂಬ ಸಮಗ್ರ ಮಾಹಿತಿ ತಿಳಿಯುತ್ತದೆ. ಅಲ್ಲಿ ಅಕ್ರಮಕ್ಕೆ ಅವಕಾಶ ಇಲ್ಲ. ಪಾರ್ಕಿಂಗ್‌ ತಾಣಗಳ ಬಗ್ಗೆ ಮೊಬೈಲ್‌ ಆ್ಯಪ್‌ ಮೂಲಕವೇ ಮಾಹಿತಿ ಸಿಗಲಿದೆ. ಹೀಗಾಗಿ ಯಾವ ಪಾರ್ಕಿಂಗ್‌ ತಾಣದಲ್ಲಿ ವಾಹನ ನಿಲುಗಡೆಗೆ ಖಾಲಿ ಜಾಗ ಇದೆ ಎಂಬ ವಿವರ ವಾಹನ ಸವಾರರಿಗೆ ಮುಂಚಿ ತವಾಗಿಯೇ ಗೊತ್ತಾಗಲಿದೆ. ವಾಹನ ತಾಣಕ್ಕಾಗಿ ಅಡ್ಡಾಡುವುದು ಇದರಿಂದ ತಪ್ಪಲಿದೆ ಎಂದು ಅವರು ಹೇಳಿದರು. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಇದೀಗ ಟೆಂಡರ್‌ ಆಹ್ವಾನಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲವೇ ತಿಂಗಳಲ್ಲಿ ಕಾರ್ಯ ನಿರ್ವಹಣೆ ಮಾಡಲಿವೆ ಎಂದರು.

ಮುಂಗಡ ಬುಕ್ಕಿಂಗ್‌ ಕೂಡ ಇದೆ: ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ರೈಲ್ವೆ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಹಾಗೂ ಸಿನಿಮಾ ಟಿಕೆಟ್‌ ಬುಕ್ಕಿಂಗ್‌ ಮಾದ ರಿಯಲ್ಲೇ ವಾಹನ ಸವಾರರು ಮೊಬೈಲ್‌ ಮೂಲಕವೇ ಪಾರ್ಕಿಂಗ್‌ ಜಾಗವನ್ನು ಕಾದಿರಿಸಬಹುದು. ಆಗ ಅವರು ಮೊದಲ ಗಂಟೆಗೆ ಶೇ. 50 ಹೆಚ್ಚುವರಿ ಪಾವತಿ ಮಾಡಬೇಕು. ಕಾರಿಗೆ ಗಂಟೆಗೆ 50 ರು. ಬಾಡಿಗೆ ಎಂದಿ ಟ್ಟುಕೊಳ್ಳಿ. ಆಗ ಮೊದಲ ಗಂಟೆಗೆ 75 ರು. ಪಾವತಿಸಬೇಕು. ನಂತರದ ಗಂಟೆಗಳ ಸಾಮಾನ್ಯ ದರವೇ ಅನ್ವಯವಾಗಲಿದೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದರು. ಈಗಾಗಲೇ ಹಲಸೂರಿನಿಂದ ಸಿರ್ಸಿ ವೃತ್ತ ಮತ್ತು ಲಾಲ್‌'ಬಾಗ್‌'ನಿಂದ ಅರಮನೆ ಮೈದಾನದ ವರೆಗಿನ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಪರಿಶೀ ಲನೆ ನಡೆಸಲಾಗಿದೆ. ಆಯ್ದ ಪ್ರದೇಶಗಳಲ್ಲಿ 4,800 ಕಾರು ಮತ್ತು 10,000 ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಬೇಡಿಕೆ ಇದೆ. ಹೀಗಾಗಿ ತ್ವರಿ ತವಾಗಿ ಪಾರ್ಕಿಂಗ್‌ ಮಾಡಲಾಗುವುದು ಎಂದರು.

ಅತ್ಯಾಧುನಿಕ ಪಾವತಿ ವ್ಯವಸ್ಥೆ: ಶುಲ್ಕ ವಿಧಿಸುವ ಮೀಟರ್‌ (ಸ್ವೈಪ್‌ ಕಾರ್ಡ್‌, ಮೊಬೈಲ್‌ ಅಪ್ಲಿಕೇಶನ್‌) ಅಳವಡಿಕೆ ಮಾಡಲಾಗುತ್ತದೆ. ಇದಲ್ಲದೆ 1 ರು., 5 ಹಾಗೂ 10 ರು. ಹೊಸ ನಾಣ್ಯಗಳನ್ನೂ ಸಹ ಸ್ವೀಕರಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಜತೆಗೆ ಸ್ಮಾರ್ಟ್‌ ಕಾರ್ಡ್‌ ಸಹ ದೊರೆಯಲಿದ್ದು, ರೀಚಾಜ್‌ರ್‍ ಮಾಡಿಸಿ ಮೆಟ್ರೋ ಕಾರ್ಡ್‌ ಮಾದರಿಯಲ್ಲೂ ಬಳಸಬಹುದು. ಇದರ ಜತೆಗೆ ರಸ್ತೆ ಮಾರ್ಗಸೂಚಿ ಅಳವಡಿಕೆ, ನಿಲುಗಡೆ ವ್ಯವಸ್ಥೆ ಹೊಂದಿದ ರಸ್ತೆಗಳ ಸ್ಥಳಾವಕಾಶದ ಕ್ಷಣ- ಕ್ಷಣದ ಮಾಹಿತಿ ಒದಗಿಸುವಿಕೆ ಮತ್ತು ಪಾರ್ಕಿಂಗ್‌ ಅಂಕಣಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಸೇರಿದಂತೆ ಈ ಯೋಜನೆಯು ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಸಮಗ್ರ ಪ್ಯಾಕೇಜ್‌ ಒಳಗೊಂಡಿದೆ.

ಎಲ್ಲೆಲ್ಲಿ ಸ್ಮಾರ್ಟ್ ಪಾರ್ಕಿಂಗ್?

‘ಎ' ವಲಯ
ಅವೆನ್ಯೂರಸ್ತೆ, ಎಸ್‌ಸಿ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌, ಡಿಕನ್‌ಸನ್‌ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರಾಜರಾಂ ಮೋಹನ್‌ರಾಯ್‌ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಕಸ್ತೂರ್ಬಾ ರಸ್ತೆ, ರೆಸಿಡೆನ್ಸಿ ರಸ್ತೆ, ಲಾಲ್‌ಬಾಗ್‌ ರಸ್ತೆ, ಎನ್‌.ಆರ್‌. ರಸ್ತೆ.

‘ಬಿ' ವಲಯ
ಎಸ್‌.ಪಿ. ರಸ್ತೆ, ಧನ್ವಂತರಿ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಪ್ಯಾಲೇಸ್‌ ರಸ್ತೆ, ಎಸ್‌.ಸಿ. ರಸ್ತೆ, ಶೇಷಾದ್ರಿ ರಸ್ತೆ, ಕೆ.ಜಿ. ರಸ್ತೆ, ಕಾಳಿದಾಸ ಮಾರ್ಗ ರಸ್ತೆ, ಲಿಂಕ್‌ ರಸ್ತೆ, ರಾಮಚಂದ್ರ ರಸ್ತೆ, ರೈಲ್ವೇ ಪ್ಯಾರಲಾಲ್‌ ರಸ್ತೆ, ಪ್ಯಾಲೇಸ್‌ ಕ್ರಾಸ್‌ ರಸ್ತೆ, ಮೈನ್‌ ಗಾಡ್‌ ಕ್ರಾಸ್‌ ರಸ್ತೆ, ಲೇಡಿ ಕರ್ಜನ್‌ ರಸ್ತೆ, ಕ್ರೆಸೆಂಟ್‌ ರಸ್ತೆ, ಮಿಲ್ಲರ್ಸ್‌ ರಸ್ತೆ, ಮಿಲ್ಲರ್ಸ್‌ ಟ್ಯಾಂಕ್‌ ಬಂಡ್‌ ರಸ್ತೆ, ಅಲಿ ಅಸ್ಕರ್‌ ರಸ್ತೆ, ಸೇಂಟ್‌ ಜಾನ್‌ ಚಚ್‌ರ್‍ ರಸ್ತೆ, ಕೆಂನ್ಸಿಂಗ್‌ಟನ್‌ ರಸ್ತೆ, ವೀರಪಿಳ್ಳೈ ಬೀದಿ, ಡಿಸ್ಪೆನ್ಸರಿ ರಸ್ತೆ, ಇಬ್ರಾಹಿಂ ಸಾಹೇಬ್‌ ಬೀದಿ, ಮೀನಾಕ್ಷಿ ಕೋಯಿಲ್‌ ಬೀದಿ, ನಾರಾಯಣ ಪಿಳ್ಳೈ ಬೀದಿ, ಸೆಪ್ಪಿಂಗ್ಸ್‌ ರಸ್ತೆ, ಧರ್ಮರಾಜ ಕೊಯಿಲ್‌ ಬೀದಿ, ಹೇನ್ಸ್‌ ರಸ್ತೆ, ಕಾಮರಾಜ ರಸ್ತೆ, ಗಂಗಾಧರ ಚೆಟ್ಟಿರಸ್ತೆ, ವುಡ್‌ಸ್ಟ್ರೀಟ್‌, ಕ್ಯಾಸ್ಟಲ್‌ ಸ್ಟ್ರೀಟ್‌, ಬ್ರಂಟನ್‌ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್‌ ಮಾರ್ಕ್ಸ್‌ ರಸ್ತೆ, ಚಚ್‌ರ್‍ ಸ್ಟ್ರೀಟ್‌,ಗ್ರಾಂಟ್‌ ರಸ್ತೆ, ಹೇಯ್‌್ಸ ರಸ್ತೆ, ಕಾನ್ವೆಂಟ್‌ ರಸ್ತೆ, ಪಂಪಮ ಹಾಕವಿ ರಸ್ತೆ, ಮಿಷನ್‌ ರಸ್ತೆ 3ನೇ ಅಡ್ಡ ರಸ್ತೆ.

‘ಸಿ' ವಲಯ
ಬಿವಿಕೆ ಅಯ್ಯಂಗಾರ್‌ ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಎ.ಎಸ್‌. ಚಾರ್‌ ಸ್ಟ್ರೀಟ್‌, ಬಳೆಪೇಟೆ ಮುಖ್ಯರಸ್ತೆ, ಬನ್ನಪ್ಪ ಪಾರ್ಕ್ ರಸ್ತೆ, ಕಬ್ಬನ್‌ಪಾರ್ಕ್ ಮುಖ್ಯರಸ್ತೆ, ಆಸ್ಪತ್ರೆ ರಸ್ತೆ, ಕೆ.ವಿ. ಟೆಂಪಲ್‌ ಸ್ಟ್ರೀಟ್‌, ಕಿಲ್ಲಾರಿ ಸ್ಟ್ರೀಟ್‌, ನಗರ್ತಪೇಟೆ ಮುಖ್ಯರಸ್ತೆ, ಪೊಲೀಸ್‌ ಸ್ಟೇಷನ್‌ ರಸ್ತೆ, ಆರ್‌.ಟಿ. ಸ್ಟ್ರೀಟ್‌, ಸುಲ್ತಾನ್‌ಪೇಟ್‌ ಮುಖ್ಯರಸ್ತೆ, ಸ್ಯಾಂಕಿ ರಸ್ತೆ, 8ನೇ ಮುಖ್ಯರಸ್ತೆ, ಜಸ್ಮಾ ಭವನ, ಎಡ್ವರ್ಡ್‌ ರಸ್ತೆ, ಅನ್ನಸ್ವಾಮಿ ರಸ್ತೆ, ತಿಮ್ಮಯ್ಯ ರಸ್ತೆ, ಬ್ರಾಡ್‌ವೆ ರಸ್ತೆ, ಸೇಂಟ್‌ಜಾನ್‌ ರಸ್ತೆ, ಒಸ್ಬೊರ್‌್ನ ರಸ್ತೆ, ಶಿವಾಜಿ ರಸ್ತೆ, ಚಿಕ್ಕಬಜಾರ್‌ ರಸ್ತೆ, ಜೈನ್‌ ಟೆಂಪಲ್‌ ರಸ್ತೆ.
-----

ಕಾರ್ಯನಿರ್ವಹಣೆ ಹೇಗೆ?
ಬೇ ಬಳಿ ಕಾರು ನಿಂತ ತಕ್ಷಣ ಸೆನ್ಸರ್‌ ಕ್ಯಾಮೆರಾ ಅದನ್ನು ಸೆರೆ ಹಿಡಿದು ಕಂಟ್ರೋಲ್‌ ಸೆಂಟರ್‌ಗೆ ಅಪ್‌ಲೋಡ್‌ ಮಾಡುತ್ತದೆ. ಎಲ್ಲಾ ಪಾರ್ಕಿಂಗ್‌ ಮೀಟರ್‌ಗಳು (ವೈಫೈ/ಜಿಪಿಆರ್‌ಎಸ್‌/ಕೇಬಲ್‌/ ಐಒಟಿ ನೆಟ್‌ವರ್ಕ್) ಮೂಲಕ ಕಂಟ್ರೋಲ್‌ ಕೊಠಡಿಗೆ ನೇರ ಸಂಪರ್ಕ ಹೊಂದಿ ರುತ್ತವೆ. ಹೀಗಾಗಿ ಎಕ್ಸಿಟ್‌ ವೇಳೆ ಎಷ್ಟುಗಂಟೆ ವಾಹನ ಇತ್ತು ಎಂಬುದರ ಆಧಾರದ ಮೇಲೆ ತನ್ನಿಂತಾನೆ ಕರಾರುವಾಕ್‌ ಆದ ಶುಲ್ಕ ತಿಳಿಸು ತ್ತದೆ. ಪಾರ್ಕಿಂಗ್‌ ಸ್ಥಳ ನಿರ್ವಹಣೆ ಮಾಡಲು ನಿರ್ವಹಣಾ ಕೇಂದ್ರ ಹಾಗೂ ಅದರಲ್ಲಿ 10/15 ಅಡಿಯ ಅಗಲದ ವಿವಿಡಿಯೋ ಪರದೆ ಹೊಂದಿದ್ದು, ಸಿಸಿಟೀವಿ ದೃಶ್ಯಾವಳಿ ಆಧಾರದ ಮೇಲೆ ನಿರ್ವಹಣೆ ಮಾಡಬೇಕಾಗುತ್ತದೆ.
1) ರಾಡಾರ್‌ ಆಧಾರಿತ ಸೆನ್ಸರ್‌ ತಂತ್ರ ಜ್ಞಾನದಿಂದ ಪಾರ್ಕಿಂಗ್‌ ಸ್ಥಳ ನಿರ್ವಹಣೆ
2) ಪಾರ್ಕಿಂಗ್‌ ತಾಣಗಳ ಬಗ್ಗೆ ಮೊಬೈಲ್‌ ಆ್ಯಪ್‌ ಮೂಲಕವೇ ಮಾಹಿತಿ
3) ಸವಾರರು ಮೊಬೈಲ್‌ ಮೂಲಕವೇ ಪಾರ್ಕಿಂಗ್‌ ಜಾಗ ಕಾದಿರಿಸಬಹುದು 
4) ಸ್ಮಾರ್ಟ್‌ ಕಾರ್ಡ್‌ ಸಹ ಲಭ್ಯ, ರೀಚಾಜ್‌ರ್‍ ಮಾಡಿಸಿ ಮೆಟ್ರೋ ಕಾರ್ಡ್‌ ಮಾದರಿ ಬಳಸಬಹುದು
5) 1 ರು., 5 ಹಾಗೂ 10 ರು. ಹೊಸ ನಾಣ್ಯ ಗಳನ್ನೂ ಸಹ ಸ್ವೀಕರಿಸುವುದು ಕಡ್ಡಾಯ

ದೇಶದಲ್ಲೇ ಮೊದಲ ಬಾರಿಗೆ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ಮುಂದಾಗಿದ್ದೇವೆ. ಈಗಾಗಲೇ ಟೆಂಡರ್‌ ಕರೆದಿದ್ದು, ಪ್ರಕ್ರಿಯೆ ಮುಗಿದ ಬಳಿಕ ಗುತ್ತಿಗೆದಾರರೊಂದಿಗೆ ಚರ್ಚಿಸಿ ಎಷ್ಟುಶುಲ್ಕ ವಿಧಿಸಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು. 2-3 ತಿಂಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಜಾರಿಯಾಗಬಹುದು.
- ಎನ್‌. ಮಂಜುನಾಥಪ್ರಸಾದ್‌, ಬಿಬಿಎಂಪಿ ಆಯುಕ್ತ

ಕನ್ನಡಪ್ರಭ ವಾರ್ತೆ
epaper.kannadaprabha.in