ಜನಾರ್ಧನ ಪೂಜಾರಿ ಅವರು ಅನಾಗರಿಕ ಭಾಷೆಯನ್ನು ಮಾತನಾಡುತ್ತಿದ್ದು, ಇದು ಅವರ ಹಿರಿತನಕ್ಕೆ ಸರಿಯಲ್ಲ ಎಂದು ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳ (ಫೆ.03): ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಯಾವುದೇ ಕಾರಣಕ್ಕೂ ಬೇರೆ ಪಕ್ಪಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ಎಸ್.ಎಂ. ಕೃಷ್ಣ ಒಬ್ಬ ಗೌರವಾನ್ವಿತ ವ್ಯಕ್ತಿ, ಅವರನ್ನು ನಿರ್ಲಕ್ಷ ಮಾಡಲಾಗಿದೆ ಎಂದು ರಾಜೀನಾಮೆ ನೀಡಿದ್ದಾರೆ. ವಯಸ್ಸಿಗನುಗುಣವಾಗಿ ಸಮಸ್ಯೆಗಳು ಬರುತ್ತವೆ. ಅಧಿಕಾರ ಇರದಿದ್ದಾಗ ಜನರು ಬರುವುದಿಲ್ಲ, ಹೀಗಾಗಿ ಅವರಿಗೆ ಸಮಸ್ಯೆಯಾಗಿ ರಾಜೀನಾಮೆ ನೀಡಿದ್ದಾರೆ ಎಂದಿದ್ದಾರೆ.
ಕೃಷ್ಣ ಹಿರಿಯರು, ಪಕ್ಷದ ವರಿಷ್ಠರು ಹಾಗೂ ನಾನು ಅವರನ್ನು ಭೇಟಿ ಮಾಡಿ ಮನವೊಲಿಸುತ್ತೇವೆ ಎಂದಿದ್ದಾರೆ.
ಜನಾರ್ಧನ ಪೂಜಾರಿ, ಜಾಫರ್ ಷರೀಫ್ ಮುಖ್ಯಮಂತ್ರಿಗಳ ಬಗ್ಗೆ ಬಹಳ ಹಗುರವಾಗಿ ಮಾಡನಾಡುತ್ತಿದ್ದಾರೆ. ಜಾಫರ್ ಷರೀಫ್ ಅವರಿಗೆ ಮುಖ್ಯಮಂತ್ರಿಯವರು ಸಾಕಷ್ಟು ಅವಕಾಶಗಳನ್ನು ನೀಡಿದ್ದಾರೆ, ಎಂದಿದ್ದಾರೆ.
ಜನಾರ್ಧನ ಪೂಜಾರಿ ಅವರು ಅನಾಗರಿಕ ಭಾಷೆಯನ್ನು ಮಾತನಾಡುತ್ತಿದ್ದು, ಇದು ಅವರ ಹಿರಿತನಕ್ಕೆ ಸರಿಯಲ್ಲ ಎಂದು ರಾಯರೆಡ್ಡಿ ಹೇಳಿದ್ದಾರೆ.
ಇನ್ನು ಕಳೆದ ಎರಡು ದಿನಗಳ ಹಿಂದೆ ಬಸ್ ಅಪಘಾತದಲ್ಲಿ ಮೃತಪಟ್ಟ ಬಾಲಕ ಅನ್ವರ್ ಅಲಿ ಕುಟುಂಬಕ್ಕೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ 1 ಲಕ್ಷ ಪರಿಹಾರ ಕೊಡಿಸುವುದಾಗಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
