ಆತ್ಮಹತ್ಯೆ ಮಾಡಿಕೊಂಡ ಜೆಎನ್'ಯು ವಿದ್ಯಾರ್ಥಿ ಅಂತ್ಯಕ್ರಿಯೆಗೆ ತೆರಳಿದ್ದ ಕೇಂದ್ರ ಸಚಿವ ಪಾನ್ ರಾಧಕೃಷ್ಣನ್ ಮೇಲೆ ಚಪ್ಪಲಿ ಎಸೆಯಲಾಗಿದೆ
ಸೇಲಂ (ಮಾ.16): ಆತ್ಮಹತ್ಯೆ ಮಾಡಿಕೊಂಡ ಜವಾಹರ್’ಲಾಲ್ ವಿವಿ ವಿದ್ಯಾರ್ಥಿಯ ಅಂತ್ಯಸಂಸ್ಕಾರಕ್ಕೆ ತೆರಳಿದ ಕೇಂದ್ರ ಸಚಿವರ ಮೇಲೆ ಚಪ್ಪಲಿ ಎಸೆದ ಘಟನೆ ಸೇಲಂ’ನಲ್ಲಿ ನಡೆದಿದೆ.
ಜೆಎನ್’ಯು’ನಲ್ಲಿ ಸಂಶೋಧನಾ ವಿಭಾಗದ ವಿದ್ಯಾರ್ಥಿಯಾಗಿರುವ ಮುತ್ತುಕೃಷ್ಣನ್ ಜೀವನಾಂತಮ್ ಕಳೆದ ಸೋಮವಾರ ಸ್ನೇಹಿತನೊಬ್ಬನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಅಂತ್ಯಕ್ರಿಯೆಗೆ ತೆರಳಿದ ಕೇಂದ್ರ ಸಚಿವ ಪಾನ್ ರಾಧಕೃಷ್ಣನ್ ಮೇಲೆ ಚಪ್ಪಲಿ ಎಸೆಯಲಾಗಿದೆ.
ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಮುತ್ತುಕೃಷ್ಣನ್, ವಿವಿಯಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಪಕ್ಷಪಾತದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಲಾಗುತ್ತಿದೆ.
