ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ವಿವಾದ ಸೃಷ್ಟಿಸಿದೆ.ಕಾನೂನುಬದ್ಧವಾಗಿ ನಡೆಯುತ್ತಿರುವ ಕಸಾಯಿಖಾನೆಗಳ ನಿರ್ವಹಣೆಗೆ ಯಾವುದೇ ಅಡ್ಡಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದರೂ ಬಹಳಷ್ಟು ಮಾಂಸದ ಅಂಗಡಿಗಳ ಮಾಲೀಕರು ಸರ್ಕಾರ ತಮ್ಮನ್ನು ಟಾರ್ಗೆಟ್ ಆಗಿಸಿಕೊಂಡಿದೆ ಎಂದು ದೂರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಉತ್ತರಪ್ರದೇಶ(ಮಾ.27): ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ವಿವಾದ ಸೃಷ್ಟಿಸಿದೆ.ಕಾನೂನುಬದ್ಧವಾಗಿ ನಡೆಯುತ್ತಿರುವ ಕಸಾಯಿಖಾನೆಗಳ ನಿರ್ವಹಣೆಗೆ ಯಾವುದೇ ಅಡ್ಡಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದರೂ ಬಹಳಷ್ಟು ಮಾಂಸದ ಅಂಗಡಿಗಳ ಮಾಲೀಕರು ಸರ್ಕಾರ ತಮ್ಮನ್ನು ಟಾರ್ಗೆಟ್ ಆಗಿಸಿಕೊಂಡಿದೆ ಎಂದು ದೂರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಲಕ್ನೋ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಾಂಸದ ವ್ಯಾಪಾರಿಗಳು ಇಂದಿನಿಂದ ಅಂಗಡಿಗಳನ್ನು ಮುಚ್ಚಿ ಅನಿರ್ಧಿಷ್ಟ ಕಾಲಾವಧಿಯ ಧರಣಿಗೆ ಕರೆ ಮುಂದಾಗಿದ್ದಾರೆ. ಲಕ್ನೋನ ಮೇಕೆ ಮಾಂಸದ ವ್ಯಾಪಾರಿಗಳು, ಮೀನು ವ್ಯಾಪಾರಿಗಳು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಸಾಯಿಖಾನೆಗಳನ್ನು ಮುಚ್ಚಿಸುವ ಸರ್ಕಾರದ ನಿರ್ಣಯದಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಮಾಂಸ ವ್ಯಾಪಾರಿಗಳ ಸಂಘ ಆತಂಕ ವ್ಯಕ್ತಪಡಿಸಿದೆ.