ಕಸದ ರಾಶಿಯಲ್ಲಿ ತಲೆ ಬುರುಡೆಗಳು ಪತ್ತೆ

First Published 19, Jan 2018, 12:54 PM IST
Skeleton found in Garbage
Highlights

ಕಸದ ರಾಶಿಯಲ್ಲಿ ಒಂದೇ ಕಡೆ 13 ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿವೆ.  ಇಲ್ಲಿನ  ವಿಜಯನಗರ 2 ನೇ ಹಂತದ ಕಸದ ರಾಶಿಯಲ್ಲಿ ತಲೆಬುರುಡೆಗಳು  ಪತ್ತೆಯಾಗಿವೆ.  ಒಟ್ಟು 12 ತಲೆಬುರಡೆಗಳನ್ನು  ಚೀಲದಲ್ಲಿ ಅಪರಿಚಿತರು ತಂದೆಸೆದಿದ್ದಾರೆ.

ಮೈಸೂರು (ಜ.19): ಕಸದ ರಾಶಿಯಲ್ಲಿ ಒಂದೇ ಕಡೆ 13 ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿವೆ.  ಇಲ್ಲಿನ  ವಿಜಯನಗರ 2 ನೇ ಹಂತದ ಕಸದ ರಾಶಿಯಲ್ಲಿ ತಲೆಬುರುಡೆಗಳು  ಪತ್ತೆಯಾಗಿವೆ.  ಒಟ್ಟು 12 ತಲೆಬುರಡೆಗಳನ್ನು  ಚೀಲದಲ್ಲಿ ಅಪರಿಚಿತರು  ತಂದೆಸೆದಿದ್ದಾರೆ.

ಬೆಳಿಗ್ಗೆ ಕಸದ ರಾಶಿ ಹೊತ್ತೊಯ್ಯಲು ಬಂದ ಪೌರ ಕಾರ್ಮಿಕರ ಕಣ್ಣಿಗೆ ಈ ತಲೆ ಬುರುಡೆಗಳು ಬಿದ್ದಿವೆ.  ಚೀಲದಲ್ಲಿ ಕಟ್ಟಿಟ್ಟಿದ್ದ ತಲೆ ಬುರುಡೆಗಳ ಪೈಕಿ ಸಣ್ಣ ಮಕ್ಕಳ ತಲೆ ಬುರುಡೆಗಳು ಇವೆ.  ಅಕ್ಕಪಕ್ಕ ಸ್ಮಶಾನ ಇಲ್ಲದಿದ್ದರೂ ತಲೆ ಬರುಡೆ ಎಲ್ಲಿಂದ ಬಂತು ಎಂಬುದು ಸ್ಥಳೀಯರ ಪ್ರಶ್ನೆ.  ಸ್ಥಳಕ್ಕೆ  ನೂರಾರು ಮಂದಿ‌ ಜಮಾಯಿಸಿದ್ದಾರೆ.  ತಲೆ ಬುರುಡೆಗಳನ್ನು‌ ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.  ಸ್ಥಳಕ್ಕೆ ವಿಜಯನಗರ ಪೊಲೀಸರ ಆಗಮಸಿ ಪರಿಶೀಲನೆ ನಡೆಸುತ್ತಿದ್ದಾರೆ.  

 

loader