ಬುಧವಾರ ಸಂಜೆ ಈ ಘಟನೆ ನಡೆದಿರುತ್ತದೆ. ಎರಡು ದಿನಗಳ ಬಳಿಕ ಬಾಲಕನ ಶವದಿಂದ ದುರ್ನಾತ ಬರಲು ಆರಂಭಿಸುತ್ತದೆ. ನೆರೆಹೊರೆಯವರು ಇದು ಇಲಿ ಸತ್ತಿರಬಹುದೆಂದು ಶಂಕಿಸಿ ರೂಮನ್ನು ತೆರೆಸುತ್ತಾರೆ. ಅಲ್ಲಿ, ಬಾಲಕನ ಶವ ಪತ್ತೆಯಾಗುತ್ತದೆ.

ನವದೆಹಲಿ(ಸೆ. 29): ತನ್ನ ಪತ್ನಿ ಸ್ನಾನ ಮಾಡುವುದನ್ನು ನೋಡಿದ ಬಾಲಕನನ್ನು ವ್ಯಕ್ತಿಯೊಬ್ಬ ಹತ್ಯೆಗೈದಿರುವ ಘಟನೆ ವರದಿಯಾಗಿದೆ. 6 ವರ್ಷದ ಬಾಲಕನನ್ನು ಕೊಲೆಗೈದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ದಿಲ್ಲಿಯ ಓಕ್ಲಾ 2ನೇ ಹಂತದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದಾರೆ. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ 6 ವರ್ಷದ ಬಾಲಕನು ಆರೋಪಿಯ ಮನೆಯ ರೂಮಿನೊಳಗೆ ಶವವಾಗಿ ಪತ್ತೆಯಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ರೋಹಿತ್ ಹೊಸದಾಗಿ ವಿವಾಹವಾಗಿರುತ್ತಾನೆ. ತನ್ನ ಪತ್ನಿಯು ಸ್ನಾನ ಮಾಡುವುದನ್ನು ಪಕ್ಕದ ಮನೆಯ 6 ವರ್ಷದ ಬಾಲಕ ಕದ್ದು ನೋಡಿದ್ದಾನೆ. ಅಲ್ಲದೇ, ಆಕೆಯ ಬಗ್ಗೆ ಅಶ್ಲೀಲವಾಗಿಯೂ ಮಾತನಾಡಿದನೆಂಬುದು ಆರೋಪಿಯ ಅನುಮಾನ. ಇದೇ ಸಿಟ್ಟಿನಲ್ಲಿ ಬಾಲಕನ ಮೇಲೆ ರೋಹಿತ್ ಹಲ್ಲೆ ಮಾಡುತ್ತಾನೆ. ಈ ವೇಳೆ, ಬಾಲಕನ ತಲೆಯು ಹಾಸಿಗೆಯ ತುದಿಗೆ ತಗುಲಿ ರಕ್ತ ಹರಿಯುತ್ತದೆ. ಗಾಬರಿಗೊಂಡ ರೋಹಿತ್ ಆ ಬಾಲಕನ ನರಳಾಟ ಆಚೆಗೆ ಕೇಳಿಸಬಾರದೆಂದು ಮುಖವನ್ನು ಬಟ್ಟೆಯಿಂದ ಬಿಗಿಯುತ್ತಾನೆ. ಬಳಿಕ ಹಾಸಿಗೆಯ ಬಾಕ್ಸ್'ನೊಳಗೆ ದೇಹವನ್ನು ಇರಿಸುತ್ತಾನೆ.

ಬುಧವಾರ ಸಂಜೆ ಈ ಘಟನೆ ನಡೆದಿರುತ್ತದೆ. ಎರಡು ದಿನಗಳ ಬಳಿಕ ಬಾಲಕನ ಶವದಿಂದ ದುರ್ನಾತ ಬರಲು ಆರಂಭಿಸುತ್ತದೆ. ನೆರೆಹೊರೆಯವರು ಇದು ಇಲಿ ಸತ್ತಿರಬಹುದೆಂದು ಶಂಕಿಸಿ ರೂಮನ್ನು ತೆರೆಸುತ್ತಾರೆ. ಅಲ್ಲಿ, ಬಾಲಕನ ಶವ ಪತ್ತೆಯಾಗುತ್ತದೆ.