ಕಣ್ಣೂರು(ಅ.2) : ಐಸಿಸ್ ಮಾದರಿಯಲ್ಲಿ ಭಾರತದಲ್ಲಿ ಉಗ್ರ ಕೃತ್ಯಕ್ಕೆ ಸಂಚು ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಕೇರಳದ ಕಣ್ಣೂರಿನಲ್ಲಿ 6 ಆರೋಪಿಗಳನ್ನು ಬಂಧಿಸಿದ್ದಾರೆ. ಒಮರ್ ಅಲಿಯಾಸ್ ಮನ್ಸೀದ್(30), ಅಬು ಬಸೀರ್(29),ಮಹಮದ್ ಅಲಿಯಾಸ್ ಯೂಸುಫ್(26), ಸಫ್ವನ್(30), ಜಸಿಮ್ ಎನ್.ಕೆ (25), ರಮ್ಶಾದ್ @ ಅಮ್ಮು(24) ಬಂಧಿತರು. ಇವರು ಕಣ್ಣೂರು ಜಿಲ್ಲೆಯ ಕನಕಮಾಲಾ ಬೆಟ್ಟದಲ್ಲಿ ರಹಸ್ಯ ಸಭೆ ನಡೆಸಿದ್ದರು. ಪ್ರಮುಖ ವ್ಯಕ್ತಿಗಳು, ಪ್ರಸಿದ್ಧ ಸ್ಥಳಗಳು ಇವರ ಟಾರ್ಗೆಟ್ ಆಗಿತ್ತು ಎನ್ನಲಾಗಿದೆ. ಬಂಧಿತರಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಸ್ಫೋಟಕ ಸಾಮಗ್ರಿ ವಶ ಪಡಸಿಸಿಕೊಳ್ಳಲಾಗಿದೆ.

