ಬಾರಾಮುಲ್ಲಾದ ರಾಮ್’ಪುರ ಸೆಕ್ಟರ್’ನಲ್ಲಿ ಉಗ್ರರನ್ನು ಎನ್’ಕೌಂಟರ್ ಮಾಡಲಾಗಿದೆ. ಎನ್’ಕೌಂಟರ್ನಲ್ಲಿ ಹಿಜ್ಬುಲ್ ಸಂಘಟನೆ ಕಮಾಂಡರ್ ಸಬ್ಜರ್ ಕೂಡ ಸಾವನ್ನಪ್ಪಿರುವುದು ತಿಳಿದುಬಂದಿದೆ.
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸೈನಿಕರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಗಡಿಯಲ್ಲಿ ನುಸುಳಲು ಯತ್ನಿಸಿದ 6 ಜನ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಬಾರಾಮುಲ್ಲಾದ ರಾಮ್’ಪುರ ಸೆಕ್ಟರ್’ನಲ್ಲಿ ಉಗ್ರರನ್ನು ಎನ್’ಕೌಂಟರ್ ಮಾಡಲಾಗಿದೆ. ಎನ್’ಕೌಂಟರ್ನಲ್ಲಿ ಹಿಜ್ಬುಲ್ ಸಂಘಟನೆ ಕಮಾಂಡರ್ ಸಬ್ಜರ್ ಕೂಡ ಸಾವನ್ನಪ್ಪಿರುವುದು ತಿಳಿದುಬಂದಿದೆ.
ರಾಮ್’ಪುರ ಸೆಕ್ಟರ್’ನಲ್ಲಿ ಇನ್ನೂ ಗುಂಡಿನ ಚಕಮಕಿ ಮುಂದುವರೆದಿದ್ದು, ಮತ್ತಷ್ಟು ಉಗ್ರರು ಅವಿತಿರುವ ಸಾಧ್ಯತೆ ಇದ್ದು, ಉಗ್ರರನ್ನು ಸೇನೆ ಸುತ್ತುವರೆದಿದೆ. ಕಾರ್ಯಾಚರಣೆ ನಡೆಯುತ್ತಿದ್ದು, ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.
(ಸಾಂದರ್ಭಿಕ ಚಿತ್ರ)