ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಒಂದು ತಿಂಗಳಾಗಿದೆ. ಎಡ- ಬಲಗಳ ನಡುವಿನ ಸಂಘರ್ಷದ ನಡುವೆಯೇ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಗೌರಿ ಹಂತಕಱರು ಅನ್ನುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿದೆ. ಆದರೆ, ಆ ಹಂತಕರ ಬಂದನಕ್ಕೆ ಮಾತ್ರ ಎಸ್ಐಟಿ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರು (ಅ.04): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಒಂದು ತಿಂಗಳಾಗಿದೆ. ಎಡ- ಬಲಗಳ ನಡುವಿನ ಸಂಘರ್ಷದ ನಡುವೆಯೇ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಗೌರಿ ಹಂತಕಱರು ಅನ್ನುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿದೆ. ಆದರೆ, ಆ ಹಂತಕರ ಬಂದನಕ್ಕೆ ಮಾತ್ರ ಎಸ್ಐಟಿ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಒಂದು ತಿಂಗಳಾಗಿದೆ. ಸೆಪ್ಟೆಂಬರ್ ಐದರ ರಾತ್ರಿ, ಗೌರಿ ಲಂಕೇಶ್ ನಿವಾಸದ ಬಳಿ, ಹೆಲ್ಮೆಟ್ ಧರಿಸಿದ ದುಷ್ಕರ್ಮಿಯೊಬ್ಬ ಗೌರಿ ಮೇಲೆ ಮೂರು ಸುತ್ತಿನ ಗುಂಡಿನ ದಾಳಿ ನಡೆಸಿ ಪರಾರಿಯಾಗ್ತಾನೆ. ಗುಂಡೇಟು ತಿಂದ ಗೌರಿ ಕ್ಷಣಾರ್ಧದಲ್ಲಿ ಪ್ರಾಣ ಬಿಡುತ್ತಾರೆ. ಗೌರಿ ಹತ್ಯೆ ಇಡೀ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಸಂಚಲನವೊಂದಕ್ಕೆ ಕಾರಣವಾಗುತ್ತದೆ. ಎಡ-ಬಲ ಎಂಬ ಘೋಷಗಳ ನಡುವೆಯೇ, ರಾಜ್ಯ ಸರ್ಕಾರ, ಗೌರಿ ಹಂತಕರನ್ನ ಬಂಧಿಸಲು ಬಿಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿಲಾಗಿತ್ತು. ಬೆಂಗಳೂರಿನ ಮೊಸ್ಟ್ ಸಕ್ಸಸ್ಫುಲ್ ಆಫೀಸರ್ಗಳಿರುವ ಈ ವಿಶೇಷ ತನಿಖಾ ತಂಡ ಎಂಟು ಕೋನಗಳಲ್ಲಿ ತನಿಖೆ ನಡೆಸುತ್ತಿದೆ.
ವೈಯುಕ್ತಿಕ, ನಕ್ಸಲ್ ವಿಚಾರ, ಗೌರಿ ಲಂಕೇಶ್ ಪತ್ರಿಕೆ ಮೇಲೆ ದಾಖಲಾದ ಮಾನನಷ್ಟ ಪ್ರಕರಣ, ಬಲಪಂಥೀಯರ ಕೈವಾಡ, ಹೀಗೆ ಎಂಟು ಕೋನಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಇನ್ನೂರಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ನಡೆಸಿದ್ದಾರೆ. ಮಾಜಿ ಭೂಗತ ದೊರೆಗಳು, ಮಾಜಿ ನಕ್ಸಲೈಟ್ಗಳು ಸ್ಥಳೀಯ ರೌಡಿಗಳು, ಹೀಗೆ, ಅನುಮಾನವಿರುವ ಎಲ್ಲರನ್ನ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ, ಇದ್ಯಾವ ದಿಕ್ಕುಗಳಲ್ಲಿಯೂ ಗೌರಿ ಹತ್ಯೆಗೆ ನಿಖರವಾದ ಸುಳಿವು ದೊರೆತಿಲ್ಲ. ಗೌರಿ ವಿಚಾರದಾರೆಯ ಬಗ್ಗೆಯೇ ಈ ಹತ್ಯೆ ನಡೆದಿದೆ ಅಂತಾ ಪೊಲೀಸರಿಗೆ ಹಲವು ಮಾಹಿತಿಗಳು ದೊರೆತಿವೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿರುವ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವೊಂದು ಲಭ್ಯವಾಗಿದೆ ಅಂತಾ ಹೇಳಲಾಗುತ್ತಿದೆ.
ಹಲವಾರು ದಿಕ್ಕುಗಳಿಂದ ಮಾಹಿತಿ ಕಲೆಹಾಕುತ್ತಿರುವ ತನಿಖಾಧಿಕಾರಿಗಳು, ಕೊಲೆಗೆ ಸಂಬಂಧಿಸಿದ ಮಹತ್ವದ ಸುಳಿವೊಂದು ಲಭ್ಯವಾಗಿದೆ. ಕೊಲೆ ಮಾಡಿದ ಆರೋಪಿಗಳು ಯಾರು ಅನ್ನೋದು ಕೂಡಾ ಎಸ್ಐಟಿ ಅಧಿಕಾರಿಗಳಿಗೆ ಸ್ಪಷ್ಟವಾದ ಮಾಹಿತಿ ಇದೆ. ಆದರೆ, ಅವರೆಲ್ಲಿ ಅಡಗಿ ಕೂತಿದ್ದಾರೆ ಅನ್ನೋದು ಮಾತ್ರ ಪೊಲೀಸ್ ಅಧಿಕಾರಿಗಳಿಗೆ ನಿಗೂಢವಾಗಿದೆ. ಆ ಹೆಜ್ಜೆಯೊಂದನ್ನ ಬೇದಿಸಿದರೆ, ಗೌರಿ ಹಂತಕರ ಸೆರೆ ಖಚಿತ ಅನ್ನೋ ಸಂದೇಶ ರವಾನೆಯಾಗುತ್ತಿದೆ. ಗೌರಿ ಹತ್ಯೆಯ ಹಂತಕರನ್ನ ಎಸ್ಐಟಿ ಬೇದಿಸುತ್ತಾ ಅಥವಾ ಇದು ಕೂಡಾ ಕಲ್ಬುರ್ಗಿ ಪ್ರಕರಣದ ದಾರಿಯನ್ನೇ ಹಿಡಿಯುತ್ತಾ ಕಾದುನೋಡಬೇಕಾಗಿದೆ.
