ಭಾರಿ ಇಳಿಕೆ ಬಳಿಕ ಶಾಕ್ ಕೊಟ್ಟ ಚಿನ್ನದ ಬೆಲೆ, ಬೆಂಗಳೂರು-ಹೈದರಾಬಾದ್‌ನಲ್ಲಿ 6,500 ರೂ ಏರಿಕೆ
ಭಾರಿ ಇಳಿಕೆ ಬಳಿಕ ಶಾಕ್ ಕೊಟ್ಟ ಚಿನ್ನದ ಬೆಲೆ, ಬೆಂಗಳೂರು-ಹೈದರಾಬಾದ್‌ನಲ್ಲಿ 6,500 ರೂ ಏರಿಕೆ, ಕಳೆದೆರಡು ದಿನ ಇಳಿಕೆಯತ್ತ ಸಾಗಿದ್ದ ಬಂಗಾರ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಬೆಳ್ಳಿ ಬೆಲೆಯೂ ದುಬಾರಿಯಾಗಿದೆ.

ಶಾಕ್ ಕೊಟ್ಟ ಚಿನ್ನ
ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಳಿತವಾಗುತ್ತಿದೆ. ಕಳೆದೆರಡು ದಿನ ಭಾರಿ ಇಳಿಕೆಯತ್ತ ಸಾಗಿದ್ದ ಬಂಗಾರ ಬೆಲೆ ಡಿಸೆಂಬರ್ 17 ರಂದು ಏರಿಕೆ ಹಾದಿ ಹಿಡಿದಿದೆ. ಈಗಾಗಲೇ ಚಿನ್ನ ದುಬಾರಿಯಾಗಿದೆ. ಜನಸಾಮಾನ್ಯರ ಕೈಗೆಟುಕದ ವಸ್ತುವಾಗಿದೆ. ಇದರ ನಡುವೆ ಇಳಿಕೆ ಸಮಾಧಾನದಲ್ಲಿ ಜನರಿಗೆ ಡಿಸೆಂಬರ್ 17ರಂದು ಏರಿಕೆ ಕಾಣುವ ಮೂಲಕ ಚಿನ್ನ ಶಾಕ್ ಕೊಟ್ಟಿದೆ.
ಬೆಂಗಳೂರಲ್ಲಿ 6,500 ರೂಪಾಯಿ ಏರಿಕೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 6500 ರೂಪಾಯಿ ಏರಿಕೆಯಾಗಿದೆ. ಹೌದು, 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ ಬೆಂಗಳೂರಲ್ಲಿ 6,500 ರೂಪಾಯಿ ಏರಿಕೆಯಾಗಿದೆ. ಅಂದರೆ 10 ಗ್ರಾಂಗೆ 650 ರೂಪಾಯಿ ಹೆಚ್ಚಾಗಿದೆ. ಇನ್ನು 100 ಗ್ರಾಂಗೆ ಬೆಂಗಳೂರು, ಹೈದರಾಬಾದ್‌ನಲ್ಲಿ 6500 ರೂಪಾಯಿ ಏರಿಕೆ ಕಂಡರೆ, ಚೆನ್ನೈನಲ್ಲಿ 5,500 ರೂಪಾಯಿ ಏರಿಕೆಯಾಗಿದೆ.
ಕೈಗೆಟುಕದ ಬಂಗಾರ
ಬೆಂಗಳೂರಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 100 ಗ್ರಾಂಗೆ 6,500 ರೂಪಾಯಿ ಏರಿಕೆಯಾಗುವ ಮೂಲಕ 13,45,100 ರೂಪಾಯಿಗೆ ತಲುಪಿದೆ. ಅಂದರೆ 10 ಗ್ರಾಂ 24 ಕ್ಯಾರಟ್ ಚಿನ್ನಕ್ಕೆ ಬೆಂಗಳೂರಿನಲ್ಲಿ 1,34,510 ರೂಪಾಯಿ. 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆ 6,000 ರೂಪಾಯಿ ಏರಿಕೆಯಾಗಿ ಇದೀಗ 12,33,000 ರೂಪಾಯಿ ತಲುಪಿದೆ. 10 ಗ್ರಾಂಗೆ 1,23,300 ರೂಪಾಯಿ.
ಬೆಳ್ಳಿ ಬೆಲೆಯಲ್ಲೂ ಏರಿಕೆ
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 8,900 ರೂಪಾಯಿ ಏರಿಕೆಯಾಗಿದೆ. ಸದ್ಯ ಕೆಜಿ ಬೆಳ್ಳಿ ಬೆಲೆ 2,08,000 ರೂಪಾಯಿ ತಲುಪಿದೆ. 100 ಗ್ರಾಂ ಬೆಳ್ಳಿಗೆ 20,800 ರೂಪಾಯಿ ಹಾಗೂ 10 ಗ್ರಾಂ ಬೆಳ್ಳಿಗೆ 2,080 ರೂಪಾಯಿಗೆ ಏರಿಕೆಯಾಗಿದೆ.
ಬೆಳ್ಳಿ ಬೆಲೆಯಲ್ಲೂ ಏರಿಕೆ
ಏರಿಕೆ ಸೂಚಿಸಿದ ತಜ್ಞರು
ಚಿನ್ನದ ಬೆಲೆಯಲ್ಲಿ ಕಳೆದೆರಡು ದಿನ ಇಳಿಕೆಯಾಗುತ್ತಿದ್ದಂತೆ ಹೂಡಿಕೆದಾರರು, ಚಿನ್ನ ಖರೀದಿದಾರರು ಸಮಾಧಾನ ಪಟ್ಟಿದ್ದರು. ಚಿನ್ನ ಖರೀದಿಗೆ ಹಲವರು ಮುಂದಾಗಿದ್ದರು. ಇದೇ ವೇಳೆ ಮತ್ತಷ್ಟು ಇಳಿಕೆಗೆ ಕಾದು ಕುಳಿತಿದ್ದರು.ಆದರೆ ಚಿನ್ನದ ಬೆಲೆ ಏರಿಕೆಯಾಗುವ ಮೂಲಕ ಮತ್ತೆ ನಿರಾಸೆಗೊಳಿಸಿದೆ. ತಜ್ಞರ ಪ್ರಕಾರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಸಾಧ್ಯತೆ ಇಲ್ಲ ಎಂದಿದ್ದಾರೆ.
ಏರಿಕೆ ಸೂಚಿಸಿದ ತಜ್ಞರು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

