ಬೆಂಗಳೂರು [ಜು.30]: ಬಿಜೆಪಿಯಿಂದ ಸತತ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾ ಸ್ಪೀಕರ್ ಆಗಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ. 

ವಿರಾಜಪೇಟೆ ಶಾಸಕ KG ಬೋಪಯ್ಯ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿ ಬಂದಿತ್ತು.  ಇದೀಗ ಅಂತಿಮವಾಗಿ ಶಿರಸಿ ಕ್ಷೇತ್ರದ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು  ಆಯ್ಕೆಯಾಗಿದರು.

ಅನರ್ಹ ಶಾಸಕರನ್ನು ಬಿಜೆಪಿಯಿಂದ ಮಂತ್ರಿ ಮಾಡಿ : ಡಿಕೆಶಿ

ಬುಧವಾರ ಕರ್ನಾಟಕ ವಿಧಾಸನಭಾ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ಪ್ರತಿಸ್ಪರ್ಧಿ ಇಲ್ಲದ ಕಾರಣ ಅಂತಿಮವಾಗಿ ಮಾಜಿ ಸಚಿವ ಕಾಗೇರಿ ಆಯ್ಕೆ ಮಾಡಲಾಗಿದೆ.

ಸ್ಪೀಕರ್  ಆಗಿ  ಆಯ್ಕೆಯಾದ ಕಾಗೇರಿ ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶಾಸಕರಾದ ಗೋವಿಂದ ಎಂ. ಕಾರಜೋಳ, ಪದ್ಮನಾಭನಗರ ಶಾಸಕ ಆರ್. ಅಶೋಕ್, ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಕೆ ಎಸ್. ಈಶ್ವರಪ್ಪ, ಎಸ್. ಸುರೇಶ್ ಕುಮಾರ್ ಮೊದಲಾದವರು ಅಭಿನಂದನೆ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ಮಂತ್ರಿ ಸ್ಥಾನ : ಅಚ್ಚರಿ ಹೆಸರುಗಳಿಗೆ ಕೊಕ್‌ ಸಾಧ್ಯತೆ?

ಸಚಿವ ಸ್ಥಾನಕ್ಕೂ ಅನ್ವಯ : ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವವರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕಾಗಿರುವುದರಿಂದ ಬಿಜೆಪಿಯಲ್ಲಿ ಈಗ ಕೇಳಿಬರುತ್ತಿರುವ ಸಚಿವ ಸ್ಥಾನದ ಹಲವು ಅಚ್ಚರಿಯ ಹೆಸರುಗಳಿಗೆ ಕೊಕ್‌ ನೀಡುವ ಸಾಧ್ಯತೆಯೂ ಇದೆ. 

ಈ ಬಗ್ಗೆ ಪಕ್ಷದ ಆಂತರಿಕ ಸಭೆಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಸ್ತಾಪಿಸಿದ್ದು, ಸರ್ಕಾರದ ಉಳಿವಿಗಾಗಿ ಪ್ರಮುಖರು ತ್ಯಾಗ ಮಾಡಬೇಕಾಗಿ ಬರಬಹುದು ಎನ್ನಲಾಗಿದೆ. ಎಲ್ಲ ಸಚಿವ ಸ್ಥಾನದ ಆಕಾಂಕ್ಷಿಗಳಿಗೂ ಅವಕಾಶ ಕಲ್ಪಿಸುವುದು ಕಷ್ಟವಾಗುತ್ತದೆ. ಅಂತಿಮವಾಗಿ ಸರ್ಕಾರ ಸುಭದ್ರವಾಗಿರಬೇಕು ಎಂಬ ಉದ್ದೇಶದಿಂದ ಈಗ ಕೇಳಿಬರುತ್ತಿರುವ ಹಲವು ಪ್ರಮುಖರ ಹೆಸರುಗಳು ಸಚಿವ ಸ್ಥಾನದ ಪಟ್ಟಿಯಿಂದ ಕೈಬಿಟ್ಟರೂ ಬೇಸರ ಮಾಡಿಕೊಳ್ಳಬೇಡಿ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.