ಬೆಂಗಳೂರು : ಫೈರ್  ಬ್ರಾಂಡ್ ಫೊಲೀಸ್ ಆಫಿಸರ್ ಎಂದೇ ಪ್ರಖ್ಯಾತರಾದ ಡಿ. ರೂಪಾ ಮೌದ್ಗಿಲ್ ಇದೀಗ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಮಗೆ ನಿಜವಾದ ಸ್ಫೂರ್ತಿ ಎಂದು ಹೊಗಳಿದ್ದಾರೆ. 

ನಿಮ್ಮ ದೂರಿನಿಂದ ಇಂದು ಮಹಿಳೆಯೋರ್ವರು ಬೆಂಗಳೂರು ಜೈಲು ಸೇರುವಂತಾಯ್ತು. ನಿಜವಾಗಲು ತಮಗೆ ನೀವು ಸ್ಫೂರ್ತಿ ಎಂದು ಸುಬ್ರಮಣಿಯನ್ ಸ್ವಾಮಿ ಅವರೊಂದಿಗಿನ ಸೆಲ್ಫಿ ಫೊಟೊವನ್ನು ಟ್ವೀಟ್ ಮಾಡಿದ್ದಾರೆ. 

ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗೆಗಿನ ಹೋರಾಟವು  ನಿಮ್ಮ ಶತ್ರುಗಳಿಗೂ ಕೂಡ ಸ್ಫೂರ್ತಿಯೇ ಎಂದು ಇನ್ನೊಂದು ಟ್ವೀಟ್ ನಲ್ಲಿ ರೂಪಾ ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಅನೇಕ ಟ್ವಿಟರ್ ಬಳಕೆ ದಾರರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಬಂದೀಖಾನೆ ಡಿಜಿಪಿ ಹುದ್ದೆಯಲ್ಲಿದ್ದ ಡಿ. ರೂಪಾ ಅವರು  ಪರಪ್ಪನ ಅಗ್ರಹಾರದಲ್ಲಿರುವ ವಾಸ್ತವತೆಯನ್ನು ಬಹಿರಂಗಗೊಳಿಸಿದ್ದರು. ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ವಿಚಾರವನ್ನು ಬೆಳಕಿಗೆ ತಂದಿದ್ದರು.   ಈ ವಿಚಾರ ದೇಶದಾದ್ಯಂತ ಸಂಚಲನ ಮೂಡಿಸಿತ್ತು.

 

The versatile person without whose complaint, probably, the lady(who enjoyed perks and privileges in Bengaluru prison as exposed by me) wouldn't have landed in prison in the first place. Sir, u inspire! .@Swamy39 pic.twitter.com/aahRlHUu1w