ಒಟ್ಟು 252 ಪುಟಗಳನ್ನು ಒಳಗೊಂಡಿರುವ 'ಪ್ರಿನ್ಸಿಪಿಯಾ ಮೆಥಮೆಟಿಕಾ' ಮರದ ಕೆತ್ತನೆಗಳುಳ್ಳ ಆಕೃತಿಗಳನ್ನು ಒಳಗೊಂಡಿದೆ ಎಂದು ಹರಾಜು ಆಯೋಜಕರಾದ ಕ್ರಿಸ್ಟೀಸ್ ಸಂಸ್ಥೆ ತಿಳಿಸಿದೆ.

ನ್ಯೂಯಾರ್ಕ್(ಡಿ.18): ಸರ್. ಐಸಾಕ್ ನ್ಯೂಟಾನ್ 1687ರಲ್ಲಿ ಬರೆದ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕ 'ಪ್ರಿನ್ಸಿಪಿಯಾ ಮೆಥಮೆಟಿಕಾ' ಅತಿ ಹೆಚ್ಚು ಬೆಲೆಗೆ ಹರಾಜಾದ ಪುಸ್ತಕ ಎಂಬ ಖ್ಯಾತಿಗೆ ಭಾಜನವಾಗಿದೆ.

ಕ್ರಿಸ್ಟೀಸ್ ಹರಾಜು ಮನೆಯಲ್ಲಿ ಆಯೋಜಿಸಿದ್ದ ಹರಾಜು ಮೇಳದಲ್ಲಿ ಕುರಿಯ ಚರ್ಮದ ಹೊದಿಗೆ ಹೊಂದಿದ್ದ ಪುಸ್ತಕದ ಮುಖಬೆಲೆ 1.5 ಅಮೇರಿಕನ್ ಮಿಲಿಯನ್ ಡಾಲರ್ ಬೆಲೆ ಬರಬಹುದೆಂದು ನಿರೀಕ್ಷಿಸಿತ್ತು. ಕೊನೆಗೆ ಈ ಪುಸ್ತಕ 3,719,500 ಡಾಲರ್'ಗೆ ಹರಾಜಾಯಿತು.

'ಪ್ರಿನ್ಸಿಪಿಯಾ ಮೆಥಮೆಟಿಕಾ' ಪುಸ್ತಕವು ನ್ಯೂಟನ್'ನ ಮೂರನೇ ನಿಯಮ ಚಲನೆಯ ನಿಯಮದ ಬಗ್ಗೆ ಬೆಳಕು ಚೆಲ್ಲಿದೆ. ಒಂದು ವಸ್ತುವು ಬಾಹ್ಯ ಶಕ್ತಿಯಿಂದ ಹೇಗೆ ಚಲಿಸುತ್ತದೆ ಎನ್ನುವುದನ್ನು ಒಳಗೊಂಡಿದೆ. ಭೌತಶಾಸ್ತ್ರ ವಿದ್ಯಾರ್ಥಿಗಳು ಇಂದಿಗೂ ಈ ನಿಯಮವನ್ನು ಬಳಸುತ್ತಿದ್ದಾರೆ.

ಒಟ್ಟು 252 ಪುಟಗಳನ್ನು ಒಳಗೊಂಡಿರುವ 'ಪ್ರಿನ್ಸಿಪಿಯಾ ಮೆಥಮೆಟಿಕಾ' ಮರದ ಕೆತ್ತನೆಗಳುಳ್ಳ ಆಕೃತಿಗಳನ್ನು ಒಳಗೊಂಡಿದೆ ಎಂದು ಹರಾಜು ಆಯೋಜಕರಾದ ಕ್ರಿಸ್ಟೀಸ್ ಸಂಸ್ಥೆ ತಿಳಿಸಿದೆ.