ಬೆಂಗಳೂರು (ಜ.25): ಮನಸ್ಮಿತ ಫೌಂಡೇಷನ್ ಕೊಡ ಮಾಡುವ  2018 ನೇ ಸಾಲಿನ ಗಾನ ಕೋಗಿಲೆ ಪ್ರಶಸ್ತಿಗೆ  ಡಾ.ಎಸ್. ಜಾನಕಿ ಭಾಜನರಾಗಿದ್ದಾರೆ.  ರಾಷ್ಟ್ರೀಯ ಪ್ರಶಸ್ತಿಗೆ ಗಾಯಕ  ರಾಜೇಶ್ ಕೃಷ್ಣನ್ ಭಾಜನರಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನಸ್ಮಿತ  ಫೌಂಡೇಶನ್ ಕೋಟ  ಸಂಚಾಲಕ ಡಾ.ಸತೀಶ್ ಪೂಜಾರಿ, ಪ್ರಶಸ್ತಿಯು 1 ಲಕ್ಷ ನಗದು ಒಳಗೊಂಡಿದೆ. ಮನಸ್ಮಿತ ಫೌಂಡೇಶನ್ ಕೋಟ ಹಾಗೂ ಗೀತಾನಂದ ಫೌಂಡೇಶನ್ ಮಣೂರು, ಯುವ ಮೆರಿಡಿಯನ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಫೆ.24 ರಂದು ಕುಂದಾಪುರದ ಒಪೇರಾ ಪಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಇದೇ ಸಂದರ್ಭದಲ್ಲಿ ಉಚಿತ ತಪಾಸಣೆ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ವೇಳೆ ಮನಸ್ಮಿತ ಫೌಂಡೇಶನ್ ಸಂಚಾಲಕ ಉದಯ ಕುಮಾರ್ ಶೆಟ್ಟಿ, ಡಾ. ಪ್ರಕಾಶ್ ತೋಳಾರ್, ಸುಬ್ರಹ್ಮಣ್ಯ ಶೆಟ್ಟಿ, ಯಾಕೂಬ್ ಖಾದರ್ ಗುಲ್ವಾಡಿ ಇದ್ದರು.