ಬೆಂಗಳೂರು (ಮಾ. 02): ಪುಲ್ವಾಮಾ ದಾಳಿ ನಂತರ ಯುದ್ಧ ಬೇಕೋ, ಬೇಡವೋ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿದೆ. ಖ್ಯಾತ ಹಿನ್ನಲೆಗಾಯಕಿ ಪಲ್ಲವಿ ಅರುಣ್ ಹಾಕಿರುವ ಪೋಸ್ಟ್ ವೈರಲ್ ಆಗಿದೆ. 

100 ಕೆಜಿ ಬಾಂಬ್ ಸ್ಫೋಟಿಸಿ ಪಾಕ್ ನಾಶಪಡಿಸುತ್ತೇನೆ: ರಾಖಿ ಸಾವಂತ್

ಪುಲ್ವಾಮಾ ದಾಳಿಯ ನಂತರ ಪಾಕ್ ಗೆ ತಕ್ಕ ಪಾಠ ಕಲಿಸಬೇಕು. ಅವರದೇ ಭಾಷೆಯಲ್ಲಿ ಉತ್ತರಿಸಬೇಕು. ಅಗತ್ಯ ಬಿದ್ದರೆ ಯುದ್ಧ ಮಾಡಬೇಕು ಎನ್ನುವ ಮಾತು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹೆಚ್ಚು ಕೇಳಿ ಬರುತ್ತಿತ್ತು. ಈ ವೇಳೆ ಪಲ್ಲವಿಯವರು ಶಾಂತಿ ಮಾತುಕತೆ ಮಾತನಾಡಿದ್ದರು. ಎರಡೂ ದೇಶದ ನಡುವೆ ಯುದ್ಧ ಬೇಕೆಂದವರು ಹೋಗಿ ಯುದ್ಧ ಮಾಡಿ. ನಮ್ಮ ಜನರು ನರಳುವುದು, ಸಾಯುವುದು ಯಾರಿಗೆ ಇಷ್ಟವಿಲ್ಲವೋ ಅವರು ನನ್ನ ಪೋಸ್ಟನ್ನು ಮತ್ತೊಮ್ಮೆ ಓದಿ. ನಿಮಗೆ ನನ್ನ ಮೇಲೆ ಇನ್ನೂ ಕೋಪವಿದ್ದರೆ ನನ್ನನ್ನು ಅನ್ ಫಾಲೋ ಮಾಡಿ ಎಂದಿದ್ದಾರೆ. ಇದು ಸಾಮಾಜಿಕ ಜಾಲತಾಣಿಗರ ಕೋಪಕ್ಕೆ ತುತ್ತಾಗಿದೆ. 

 

ದರ್ಶನ್- ಸುದೀಪ್ ಮುಖಾಮುಖಿಗೆ ಸಿದ್ಧವಾಗಿದೆ ವೇದಿಕೆ!

ಇನ್ನು ಮುಂದುವರೆದು ವಿಂಗ್ ಕಮಾಂಡರ್ ಅಭಿನಂದನ್ ರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಕಡೆಗೂ ಸೇಫ್ ಆಗಿ ಭಾರತಕ್ಕೆ ಹಿಂತಿರುಗಿದ್ದಾರೆ ಎಂದು ಪೋಸ್ಟ್ ಹಾಕಿದ್ದರು. ಇದು ಕೂಡಾ ಆಕ್ರೋಶಕ್ಕೆ ಕಾರಣವಾಗಿದೆ.