ನವದೆಹಲಿ(ಆ. 13)  ರ‍್ಯಾಪ್‌ ಗಾಯಕಿ ಹಾರ್ಡ್ ಕೌರ್ ಬೇಡದ ಕಾರಣಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ   ವಿರುದ್ಧ ಅವಹೇಳನಕಾರಿ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ಟ್ವಿಟರ್ ಅವರ ಖಾತೆಯನ್ನೇ ಸಸ್ಪೆಂಡ್ ಮಾಡಿದೆ.

ಪ್ರಧಾನಿ ಮೋದಿ ಮತ್ತು ಶಾ ಅವರನ್ನು ಅವಹೇಳನ ಮಡುವ ರೀತಿಯ 2 ನಿಮಿಷದ ವಿಡಿಯೋ ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಕೆಲವು ಖಲೀಸ್ತಾನ ವಿಚಾರಗಳನ್ನು ಹೇಳಿದ್ದರು.

ದಟ್ಟಾರಣ್ಯದಲ್ಲಿ ಮೋದಿ ಸಾಹಸ, ಸೋಶಿಯಲ್ ಮೀಡಿಯಾ ರಿಯಾಕ್ಷನ್ ಅಬ್ಬಬ್ಬಾ!

ಹಾರ್ಡ್ ಕೌರ್ ಪೋಸ್ಟ್ ಮಾಡಿದ ತಕ್ಷಣವೇ ವಿಡಿಯೋ ವೈರಲ್ ಆಗಲು ಆರಂಭಿಸಿದೆ. ಇದಾದ ಮೇಲೆ ತಮ್ಮ ಮುಂದಿನ ಆಲ್ಬಮ್ ವಿ ಆರ್ ವಾರಿಯರ್ಸ್ ಅನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿಯೂ ಖಲೀಸ್ತಾನದ ಬೆಂಬಲಿಗರು ಕಾಣಿಸಿಕೊಂಡಿದ್ದು ಸಹಜವಾಗಿಯೇ  ನೆಟ್ಟಿಗರನ್ನು ಕೆರಳಿಸಿದೆ.

ಸಿಖ್ ಸಮುದಾಯದವರು ಭಾರತದಿಂದ ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ ಎಂಬ ಅರ್ಥ ಬರುವಂಥಹ ರೀತಿಯ ವಿಡಿಯೋವನ್ನು ಪೋಸ್ಟ್ ಆಗಿಯೂ ದೊಡ್ಡ ಸುದ್ದಿಯಾಗಿತ್ತು.