Asianet Suvarna News Asianet Suvarna News

ಸುಳ್ಳು ಸುದ್ದಿ ಹಬ್ಬಿಸಿದರೆ 5 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ ಖಚಿತ!

ಸುಳ್ಳು ಸುದ್ದಿ ತಡೆ ಕಾಯ್ದೆ ಜಾರಿ| ಸುಳ್ಳು ಸುದ್ದಿ ಹಬ್ಬಿಸಿದರೆ 5 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ ಖಚಿತ!| 

Singapore fake news law comes into force offenders face fines and prison time
Author
Bangalore, First Published Oct 3, 2019, 9:18 AM IST

ಸಿಂಗಾಪುರ[ಅ.03]: ಸುಳ್ಳು ಸುದ್ದಿ ಹರಡುವವರ ವಿರುದ್ಧ ಭಾರಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಸುಳ್ಳು ಸುದ್ದಿ ತಡೆ ಕಾಯ್ದೆಯನ್ನು ಸಿಂಗಾಪುರ ಸರ್ಕಾರ ಬುಧವಾರ ಜಾರಿಗೊಳಿಸಿದೆ. ದೇಶಾದ್ಯಂತ ತಂತ್ರಜ್ಞಾನ ದಿಗ್ಗಜರು ಹಾಗೂ ಹೋರಾಟಗಾರರ ತೀವ್ರ ಪ್ರತಿಭಟನೆಯ ಹೊರತಾಗಿಯೂ ಸರ್ಕಾರ ಈ ಕಾಯ್ದೆ ಜಾರಿಗೆ ತಂದಿದ್ದು, ಸರ್ಕಾರದ ಈ ನಿರ್ಧಾರ ಅಭಿವ್ಯಕ್ತಿ ಸ್ವಾತಂತ್ರದ ಹರಣ ಎಂದು ದೂರಿದ್ದಾರೆ.

ಸುಳ್ಳು ಸುದ್ದಿ ಪ್ರಸಾರ ತಡೆಗೆ ವಿಶ್ವಸಂಸ್ಥೆಯೊಂದಿಗೆ ಭಾರತ ಸಹಿ!

ಈ ಹೊಸ ಕಾಯ್ದೆಯಿಂದಾಗಿ ಸಾಮಾಜಿಕ ಜಾಲತಾಣಗಳಿಗೆ ಮೂಗುದಾರ ಬೀಳಲಿದ್ದು, ಸುಳ್ಳು ಸುದ್ದಿಗಳನ್ನು ಹರಡುವ ಪೋಸ್ಟ್‌ಗಳನ್ನು ಅಪ್ಲೋಡ್‌ ಮಾಡಿದರೆ ಅಲ್ಲೇ ಎಚ್ಚರಿಕೆ ಸಂದೇಶ ಬರುತ್ತದೆ. ಸುದ್ದಿ ತೀವ್ರ ತರಹದ್ದಾಗಿದ್ದರೆ ಅಂಥವುಗಳನ್ನು ತೆಗೆದು ಹಾಕಲಾಗುತ್ತದೆ.

ಫೇಕ್‌ ನ್ಯೂಸ್‌ ವಿರುದ್ಧ ಸಮರ ಯಾವ ದೇಶದಲ್ಲಿ ಹೇಗಿದೆ?

ಈ ಕಾಯ್ದೆಯಡಿ ದೇಶದ ಕುರಿತು ದುರುದ್ದೇಶಪೂರಿತ ಹಾಗೂ ಹಾನಿಕಾರ ಸುದ್ದಿ ಪ್ರಕಟಿಸಿದ ಕಂಪನಿಗಳಿಗೆ 5 ಕೋಟಿ ರು. ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ನೀಡಲಾಗುತ್ತದೆ. ಸದ್ಯ ಸಿಂಗಾಪುರದಲ್ಲಿ ಮುಖ್ಯ ಕಚೇರಿ ಹೊಂದಿರುವ ಫೇಸ್ಬುಕ್‌, ಟ್ವಿಟರ್‌ ಹಾಗೂ ಗೂಗಲ್‌ಗೆ ಈ ಕಾಯ್ದೆಯಲ್ಲಿನ ಕೆಲ ಅಂಶಗಳಿಂದ ತಾತ್ಕಾಲಿಕ ಅವಧಿಗೆ ವಿನಾಯ್ತಿ ನೀಡಲಾಗಿದೆ.

Follow Us:
Download App:
  • android
  • ios