ಅರಸು ಬಳಿಕ 5 ವರ್ಷ ಆಡಳಿತ ಪೂರೈಸಿದ ಸಿಎಂ ಸಿದ್ದರಾಮಯ್ಯ ಮಾತ್ರ..!

news | Friday, February 23rd, 2018
Suvarna Web Desk
Highlights

ಬಜೆಟ್ ಮೇಲಿನ ಚರ್ಚೆಗೆ  ಸಿಎಂ ಸಿದ್ದರಾಮಯ್ಯ ಇಂದಿನ ಅಧಿವೇಶನದಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಅಧಿಕಾರವಧಿಯ ಕೊನೆಯ ದಿನ ಸಿಎಂ ಭಾಷಣ ಮಾಡಿದ್ದು, ನಾನು ಸಿಎಂ ಆಗಿ 6 ಬಜೆಟ್ ಮಂಡಿಸಿದ್ದೇನೆ. ಹಣಕಾಸು ಮಂತ್ರಿಯಾಗಿ ಒಟ್ಟು 13 ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿದ್ದಾರೆ.

ಬೆಂಗಳೂರು : ಬಜೆಟ್ ಮೇಲಿನ ಚರ್ಚೆಗೆ  ಸಿಎಂ ಸಿದ್ದರಾಮಯ್ಯ ಇಂದಿನ ಅಧಿವೇಶನದಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಅಧಿಕಾರವಧಿಯ ಕೊನೆಯ ದಿನ ಸಿಎಂ ಭಾಷಣ ಮಾಡಿದ್ದು, ನಾನು ಸಿಎಂ ಆಗಿ 6 ಬಜೆಟ್ ಮಂಡಿಸಿದ್ದೇನೆ. ಹಣಕಾಸು ಮಂತ್ರಿಯಾಗಿ ಒಟ್ಟು 13 ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿದ್ದಾರೆ.

ದೇವರಾಜ್ ಅರಸರ ಬಳಿಕ 5 ವರ್ಷ ಆಡಳಿತಾವಧಿ ಪೂರೈಸಿದ್ದೇನೆ. 5 ವರ್ಷ ಜನರ ಆಶಿರ್ವಾದ ನನಗೆ ಸಿಕ್ಕಿದೆ. ಯಶಸ್ವಿಯಾಗಿ ಅಧಿಕಾರ ನಡೆಸಿ ಸುಭದ್ರ ಆಡಳಿತವನ್ನು ನೀಡಿದ್ದೇನೆ. ಪ್ರತಿಪಕ್ಷಗಳು ಟೀಕೆಗಳನ್ನ ಮಾಡಿವೆ. ಸಲಹೆಗಳನ್ನು ನೀಡಿವೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಬಹುತೇಕರು ಗೈರು

ವಿಧಾನಸಭೆಯಲ್ಲಿ ಬಹುತೇಕ ಸಚಿವರು ಗೈರಾಗಿದ್ದು, ಅವರ ಪರ ಕಾಗದ ಪತ್ರಗಳನ್ನ ಮಂಡಿಸಿದ ಸಿಎಂಗೆ  ಬಿಜೆಪಿಯಿಂದ ಟಾಂಗ್ ನೀಡಲಾಯ್ತು.  ಅಧಿಕಾರ ವಹಿಸಿಕೊಂಡಾಗ ಸಿಂಗಲ್ ಕ್ಯಾಬಿನೆಟ್ ಆಗಿತ್ತು. ಸರ್ಕಾರದ ಕೊನೆಯ ಅಧಿವೇಶನದ ದಿನವೂ  ಸಿಂಗಲ್ ಕ್ಯಾಬಿನೆಟ್ ಆಗಿದೆ ಎಂದು ಸುರೇಶ್ ಕುಮಾರ್ ಸಿಎಂಗೆ ಕಾಲೆಳೆದರು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk