ದೇಶದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿ ಹಾಯಾಗಿರುವ ವಿಜಯ್ ಮಲ್ಯ ದೇಶಕ್ಕೆ 'ದಿವಾಳಿ' ಶುಭಾಶಯ ಕೋರಿದ್ದಾರೆ. ಅವರು ಕೋರಿರುವುದು ದೀಪಾವಳಿ ಶುಭಾಶಯ ಆಗಿದ್ದರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ದಿವಾಳಿ ಶುಭಾಶಯ ಎಂದೇ ಅಣಕವಾಡಲಾಗಿದೆ..

ಬೆಂಗಳೂರು(ನ.08) ಆರ್ಥಿಕ ಅಪರಾಧಿ, ದೇಶಭ್ರಷ್ಟ ಮಲ್ಯ ಭಾರತ ಇಂಗ್ಲೆಂಡ್ ಟೆಸ್ಟ್ ನೋಡಲು ಬಂದಿದ್ದು ಹಳೆ ಸುದ್ದಿ. ಇದೀಗ ಅಪ್ಪ-ಮಗ ದೇಶಕ್ಕೆ ದೀಪಾವಳಿ ಶುಭಾಶಯ ಕೋರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಶಿಯಲ್ ಮೀಡಿಯಾದಲ್ಲಿ ಇದನ್ನು ದಿವಾಳಿ ಶುಭಾಶಯ ಎಂದೇ ಅಣಕವಾಡಲಾಗಿದೆ. ಫೋಟೋ ಸಾವಿರಕ್ಕೂ ಅಧಿಕ ಶೇರ್ ಪಡೆದುಕೊಂಡಿದೆ.

ಮಲ್ಯ ವಿದೇಶಕ್ಕೆ ಪಲಾಯನ ಮಾಡಿ ವರ್ಷಗಳೆ ಉರುಳಿದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅನೇಕ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ಮಲ್ಯ ಬಾಕಿ ಇರಿಸಿಕೊಂಡಿದ್ದಾರೆ. ರಾಜಕಾರಣದ ವಾಕ್ಸಮರಕ್ಕೂ ಮಲ್ಯ ಪ್ರಕರಣ ಆಗಾಗ ಕಾರಣವಾಗುತ್ತಾ ಇರುತ್ತದೆ.