ಸಿದ್ಧಗಂಗಾ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಚಿಕಿತ್ಸೆಗೆ ಸ್ಪಂದಿಸುತ್ತಿರುವ ಶ್ರೀಗಳು

Siddhaganga Shri Operation Success
Highlights

ಸಿದ್ಧಗಂಗಾ ಶ್ರೀಗಳ ಶಸ್ತ್ರಚಿಕಿತ್ಸೆ ಮುಕ್ತಾಯಗೊಂಡಿದ್ದು,  ಶ್ರೀಗಳಿಗೆ ಸ್ಟಂಟ್ ಅಳವಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಬೆಂಗಳೂರು (ಜ.26): ಸಿದ್ಧಗಂಗಾ  ಶ್ರೀಗಳ ಶಸ್ತ್ರಚಿಕಿತ್ಸೆ ಮುಕ್ತಾಯಗೊಂಡಿದ್ದು,  ಶ್ರೀಗಳಿಗೆ ಸ್ಟಂಟ್ ಅಳವಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ನೇತೃತ್ವದಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ವೈದ್ಯರು ​ಯಶಸ್ವಿಯಾಗಿದ್ದಾರೆ. ಈಗ ಶ್ರೀಗಳು ಚಿಕಿತ್ಸೆಗೆ  ಸ್ಪಂದಿಸುತ್ತಿದ್ದಾರೆ.  ಶ್ರೀಗಳಿಗೆ  ಈಗಾಗಲೇ 4  ನೇ ಬಾರಿ ಸ್ಟಂಟ್ ಅಳವಡಿಸಲಾಗಿದೆ. ಇದೀಗ 5  ನೇ ಬಾರಿಗೆ ಸ್ಟಂಟ್ ಅಳವಡಿಕಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು  ಈ ಬಾರಿ ಪಿತ್ತನಾಳದಲ್ಲಿ ಸ್ಟಂಟ್ ಅಳವಡಿಸಲಾಗಿದೆ.  ಶಸ್ತ್ರಚಿಕಿತ್ಸೆ ಬಳಿಕ ವಿಶೇಷ ವಾರ್ಡ್​ಗೆ ಶ್ರೀಗಳನ್ನು  ಶಿಫ್ಟ್​ ಮಾಡಲಾಗಿದೆ. ​

ಇಂದು ಒಂದು ದಿನ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.  ಶನಿವಾರ ಅಥವಾ ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

loader