ರಾಮನಗರ ವರ್ಸಸ್ ಮೈಸೂರು,, ಹೊಸ 'ಕತೆ' ಶುರುವಾಗಿದೆ!
ಮುಖ್ಯಮಂತ್ರಿ ಎಚ್ ಡಿ.ಕುಮಾರಸ್ವಾಮಿಗೆ ಮಾಜಿ ಸಿಎಂ ಮತ್ತೊಂದು ಪತ್ರ ಬರೆದಿದ್ದಾರೆ. ಬಜೆಟ್ ಗೂ ಮುನ್ನ ಮತ್ತು ಬಜೆಟ್ ನಂತರವೂ ಈ ಪತ್ರ ಸಮರ ಮುಂದುವರಿದುಕೊಂಡೇ ಬಂದಿದೆ. ಹಾಗಾದರೆ ಈ ಬಾರಿ ಯಾವ ಕಾರಣಕ್ಕೆ ಪತ್ರ ಬರೆದಿದ್ದಾರೆ. ಇಲ್ಲಿದೆ ವಿವರ
ಬೆಂಗಳೂರು(ಆ.6) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಬಜೆಟ್ ನಲ್ಲಿ ಘೋಷಣೆ ಮಾಡಿರುವ ಚಿತ್ರನಗರಿಯನ್ನು ಮೈಸೂರಿನಲ್ಲೇ ಸ್ಥಾಪನೆ ಮಾಡಲು ಆಗ್ರಹಿಸಿದ್ದಾರೆ.
ಬಜೆಟ್ ನಲ್ಲಿ ಘೋಷಿಸಿರುವ ಚಿತ್ರನಗರಿ ಸ್ಥಳಾಂತರವನ್ನು ಮರುಪರಿಶೀಲಿಸಲು ಆಗ್ರಹಪಡಿಸಿರುವ ಸಿದ್ದರಾಮಯ್ಯ ಮೈಸೂರಿನಲ್ಲಿ ಎಲ್ಲಾ ಭಾಷೆಗಳ ಚಿತ್ರಗಳ ಚಿತ್ರೀಕರಣ ನಡೆಯುತ್ತಿರುತ್ತದೆ. ಮೈಸೂರಿನಲ್ಲಿ ಚಿತ್ರಿಕರಣಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳು ಇದೆ. ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯಾಗಬೇಕು ಅನ್ನೋದು ಡಾ.ರಾಜ್ಕುಮಾರ್ ಅವರ ಕನಸಾಗಿತ್ತು ಎಂದು ಪತ್ರದಲ್ಲಿ ಹೇಳಿದ್ದಾರೆ.
ಇದೇ ಆಧಾರದಲ್ಲಿ ಹಿಂದಿನ ಸರಕಾರ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ನಿರ್ಣಯ ಮಾಡಿಕೊಂಡಿದ್ದೇವು. ಚಿತ್ರನಗರಿ ಸ್ಥಾಪನೆಗಾಗಿ ನೂರಾರು ಎಕರೆ ಜಮೀನು ಮಂಜೂರು ಮಾಡಿ, ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಆದರೆ ಹೊಸ ಬಜೆಟ್ ನಲ್ಲಿ ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದ್ದೀರಿ. ಆದರೆ ಈ ನಿರ್ಧಾರ ಮತ್ತೆಮರುಪಶೀಲಿಸಿ ಮೈಸೂರಿನಲ್ಲಿಯೇ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.