ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಉಪಚುನಾವಣೆ ಕಾವು ಏರುತ್ತಲೇ ಇದೆ. ಶಕ್ತಿಸೌಧವೇ ಅಲ್ಲಿಗೆ ಶಿಫ್ಟ್ ಆಗಿದ್ದರೂ ಪ್ರತಿಪಕ್ಷಗಳು ಸುಮ್ಮನಾಗಿಲ್ಲ. ಇವಾಗ ಅಖಾಡಕ್ಕೆ ಸ್ವತಃ ಸಿಎಂ ಸಿದ್ಧರಾಮಯ್ಯ ಕೂಡ ಪ್ರವೇಶ ನೀಡಲಿದ್ದಾರೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಬೈ ಎಲೆಕ್ಷನ್​ ಅಖಾಡ ನಾಳೆಯಿಂದ ಮತ್ತೊಂದು ಮಜಲಿಗೆ ಹೊರಳಲಿದೆ. ಯಾಕೆಂದರೆ ಸಿಎಂ ಸಿದ್ಧರಾಮಯ್ಯ ಅಧಿಕೃತವಾಗಿ ಪ್ರಚಾರಕ್ಕೆ ಧುಮಕಲಿದ್ದು ಕಣ ಕಾವೇರಲಿದೆ.

ಮೈಸೂರು(ಮಾ.30): ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಉಪಚುನಾವಣೆ ಕಾವು ಏರುತ್ತಲೇ ಇದೆ. ಶಕ್ತಿಸೌಧವೇ ಅಲ್ಲಿಗೆ ಶಿಫ್ಟ್ ಆಗಿದ್ದರೂ ಪ್ರತಿಪಕ್ಷಗಳು ಸುಮ್ಮನಾಗಿಲ್ಲ. ಇವಾಗ ಅಖಾಡಕ್ಕೆ ಸ್ವತಃ ಸಿಎಂ ಸಿದ್ಧರಾಮಯ್ಯ ಕೂಡ ಪ್ರವೇಶ ನೀಡಲಿದ್ದಾರೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಬೈ ಎಲೆಕ್ಷನ್​ ಅಖಾಡ ನಾಳೆಯಿಂದ ಮತ್ತೊಂದು ಮಜಲಿಗೆ ಹೊರಳಲಿದೆ. ಯಾಕೆಂದರೆ ಸಿಎಂ ಸಿದ್ಧರಾಮಯ್ಯ ಅಧಿಕೃತವಾಗಿ ಪ್ರಚಾರಕ್ಕೆ ಧುಮಕಲಿದ್ದು ಕಣ ಕಾವೇರಲಿದೆ.

ನಾಳೆಯಿಂದ ಉಪಸಮರದಲ್ಲಿ ಸಿಎಂ ಸಿದ್ದರಾಮಯ್ಯ

ಚುನಾವಣೆ ತನಕ ಪ್ರಚಾರದಲ್ಲಿ ತೊಡಗಿಕೊಳ್ತೀನಿ. ಎರಡೂ ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ ಅಂತ ಸಿಎಂ ಸಿದ್ಧರಾಮಯ್ಯ ಬೆಂಗಳೂರಿನ ನಿವಾಸ ಕಾವೇರಿಯಲ್ಲಿ ಹೇಳಿದ್ದಾರೆ. ಇನ್ನು ಗೀತಾ ಮಹಾದೇವ್ ಪ್ರಸಾದ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಡುವಿನ ಆರೋಪ ಪ್ರತ್ಯಾರೋಪದ ಬಗ್ಗೆಯೂ ಸಿಎಂ ಪ್ರತಿಕ್ರಿಯಿಸಿದ್ದು, ಯಡಿಯೂರಪ್ಪ ವಿರುದ್ಧದ ಗೀತಾ ಪ್ರಸಾದ್‌ ಆರೋಪ ನಿಜ ಇರಬಹುತು ಅಂತ ಹೇಳಿದರು.

ಒಟ್ಟಿನಲ್ಲಿ ಉಪಚುನಾವಣೆಗೆ ಕೆಲವೇ ದಿನಗಳು ಬಾಕಿ. ಬಜೆಟ್ ಅಧಿವೇಶನ ನಡುವೆಯೇ ಸಚಿವರು ಪ್ರಚಾರದಲ್ಲಿ ತೊಡಗಿದ್ದರು. ಇದೀಗ ಸಿಎಂ ಸಿದ್ಧರಾಮಯ್ಯ ಆಗಮನದಿಂದ ಕದನ ಕುತೂಹಲ ಮೂಡಿಸಿದೆ.