ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ ಹಿರಿಯ ನಾಯಕರ ಕೈಗೆ ಸಿಗದೇ ಬಂಡಾಯದ ಬಾವುಟ ಹಾರಿಸಿದ್ದ ರೆಬೆಲೆ ಶಾಸಕ ಕೊನೆಗೂ ಸಂಪರ್ಕಕ್ಕೆ ಸಿಕ್ಕಿದ್ದಾರೆ. 

ಬೆಂಗಳೂರು (ಸೆ.23): ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ ಹಿರಿಯ ನಾಯಕರ ಕೈಗೆ ಸಿಗದೇ ಬಂಡಾಯದ ಬಾವುಟ ಹಾರಿಸಿದ್ದ ಶಾಸಕ ಡಾ. ಕೆ. ಸುಧಾಕರ್ ಕೊನೆಗೂ ಸಂಪರ್ಕಕ್ಕೆ ಸಿಕ್ಕಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಸಮಾಧನಗೊಂಡ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಸುಧಾಕರ್ ಅವರನ್ನು ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಿದ್ದರಾಮಯ್ಯ ಬಳಿ ಕರೆತಂದಿದ್ದಾರೆ.​ ಈ ವೇಳೆ ರೆಬೆಲ್ ಶಾಸಕ ಸುಧಾಕರ್ ಗೆ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಶಾಂತಿ ಪಾಠ ಮಾಡಿದ್ದಾರೆ.

ನಿಮ್ಮ ಸಮಸ್ಯೆ ಏನೆ ಇದ್ದರೂ ನನ್ನ ಬಳಿ ಬಂದು ಚರ್ಚಿಸಿ. ನಾನು ಅದನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಅದನ್ನು ಬಿಟ್ಟು ಏಕಾಏಕಿ ಹೈಕಮಾಂಡ್ ತೀರ್ಮಾನದ ವಿರುದ್ಧ ಹೋದರೆ ಹೇಗೆ? ನೀನು ನನ್ನ ಜೊತೆಗಿದ್ದವನು, ನೀನೇ ಹೀಗೆ ಮಾಡಿದ್ರೆ ಹೇಗೆ ? ಎಂದು ಸಿದ್ದು ಪ್ರಶ್ನಿಸಿದ್ದಾರೆ.

ನಿನ್ನ ಸಮಸ್ಯೆ ಏನೇ ಇದ್ದರೂ ನನ್ನ ಬಳಿ ಹೇಳಿ. ಪಕ್ಷ ನಿಮ್ಮೊಂದಿಗೆ ಇದೆ. ಎಲ್ಲ ಅಸಮಾಧಾನ ಬಿಟ್ಟು ಪಕ್ಷದಲ್ಲಿರು. ನಿನ್ನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಿದ್ದು ಸಮಧಾನ ಮಾಡಿದ್ದಾರೆ ಎನ್ನಲಾಗಿದೆ.