ದೇವೇಗೌಡರ ಶೈಲಿಯಲ್ಲಿ ಗೌಡರನ್ನು ಟೀಕಿಸಿದ ಅವರು' ನನ್ನ ಕೊನೆ ಆಸೆ ಮಗನನ್ನು ಸಿಎಂ ಮಾಡಬೇಕೆನ್ನುವುದು ಎನ್ನುತ್ತಿದ್ದಾರೆ ದೇವೇಗೌಡರು, ಆದರೆ ದಲಿತರನ್ನು ಏಕೆ ಸಿಎಂ ಮಾಡಬಾರದು'ಎಂದು ಪ್ರಶ್ನಿಸಿದರು.

ಕೊಪ್ಪಳ(ಡಿ.14): ತಾಕತ್ತಿದ್ದರೆ ದಲಿತ ನಾಯಕನನ್ನು ಸಿಎಂ ಮಾಡುವಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಪ್ಪಳದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮಾವೇಶ ಮಾಡುತ್ತಿದೆ. ದೇವೇಗೌಡರ ಜತೆ ಕೆಲಸ ಮಾಡಿರುವ ನನಗೆ ಎಲ್ಲವೂ ಗೊತ್ತಿದೆ. ದಲಿತರನ್ನು ಉಪ ಮುಖ್ಯಮಂತ್ರಿ ಮಾಡುತ್ತೇನೆಂದು ಎಚ್ಡಿಕೆ ಹೇಳುತ್ತಿದ್ದಾರೆ. ಆದರೆ ದಲಿತರನ್ನು ಸಿಎಂ ಏಕೆ ಮಾಡಬಾರದೆಂದು ಸಿಎಂ ಪ್ರಶ್ನಿಸಿದರು.

ದೇವೇಗೌಡರ ಶೈಲಿಯಲ್ಲಿ ಗೌಡರನ್ನು ಟೀಕಿಸಿದ ಅವರು' ನನ್ನ ಕೊನೆ ಆಸೆ ಮಗನನ್ನು ಸಿಎಂ ಮಾಡಬೇಕೆನ್ನುವುದು ಎನ್ನುತ್ತಿದ್ದಾರೆ ದೇವೇಗೌಡರು, ಆದರೆ ದಲಿತರನ್ನು ಏಕೆ ಸಿಎಂ ಮಾಡಬಾರದು'ಎಂದು ಪ್ರಶ್ನಿಸಿದರು. ನಾನು ಮಾತ್ರ ದಲಿತರ ಪರ ಇದ್ದೇನೆ. ದಲಿತರು ಮುಖ್ಯಮಂತ್ರಿ ಆಗಬೇಕು ಎನ್ನುವುದೇ ನನ್ನ ಆಸೆ'ಎಂದು ಹೇಳಿದರು.