ಬೆಂಗಳೂರು[ಜು. 13] ನಾನು ಕಾಂಗ್ರೆಸ್ ನಲ್ಲೇ ಇದ್ದೇನೆ. ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಹೇಳುತ್ತಲೇ ಬಂದಿದ್ದ ರೆಬಲ್ ಶಾಸಕ ಎಂಟಿಬಿ ನಾಗರಾಜ್ ರಾಜೀನಾಮೆ ಹಿಂದಕ್ಕೆ ಪಡೆಯುವ ತೀರ್ಮಾನ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಮನವೊಲಿಕೆ ಸಕ್ಸಸ್ ಆಗಿದೆ. ಹೊಸಕೋಟೆ ಶಾಸಕರು ರಾಜೀನಾಮೆ ಹಿಂದಕ್ಕೆ ಪಡೆಯಲು ಒಪ್ಪಿಕೊಂಡಿದ್ದಾರೆ. ಪಕ್ಷದಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದ ಎಂಟಿಬಿ ನಾಗರಾಜ್ ಒಂದು ಪಕ್ಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದರೆ ಇನ್ನೊಂದು ಪಕ್ಕದಲ್ಲಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಇದ್ದರು.

 ಒಂದು ಕಡೆ ಅತೃಪ್ತರ ಮನವೊಲಿಕೆ, ಇನ್ನೊಂದು ಕಡೆ ಬಿಜೆಪಿ ಗೇಮ್ ಪ್ಲ್ಯಾನ್ ಬಿಚ್ಚಿಟ್ಟ BSY

ನಾನು ಮತ್ತು ಸುಧಾಕರ್ ಒಟ್ಟಿಗೆ ರಾಜೀನಾಮೆ ನೀಡಿದ್ದೇವು. ಸುಧಾಕರ್ ಜತೆಗೆ ಮಾತನಾಡಿಯೇ ಅಂತಿಮ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಹೇಳುತ್ತ ಎಂಟಿಬಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದರು. ಒಮ್ಮೆ ವಾಪಸ್ ಪಡೆಯುತ್ತೇನೆ ಎಂದವರು ಇನ್ನೊಮ್ಮೆ ಸುಧಾಕರ್ ಜತೆ ಮಾತನಾಡಿ ತೀರ್ಮಾನ ಎಂದಿದ್ದಾರೆ.

"