ಹುಬ್ಬಳ್ಳಿ (ಆ. 20): ರಾಜ್ಯದಲ್ಲಿ ಪ್ರವಾಹ ಬಂದು 15 ದಿನ ಕಳೆದರೂ ಈವರೆಗೆ ಕೇಂದ್ರದಿಂದ ನಯಾಪೈಸೆ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಧಾನಿ ಭೇಟಿಯಾಗಿ ಬಂದರೂ ಎಷ್ಟುಹಣ ಕೊಡುತ್ತಾರೆಂದು ಹೇಳಿಲ್ಲ. ಪ್ರಧಾನಿ ಮೋದಿ ಅವರು ಮಲತಾಯಿ ಧೋರಣೆ ಬಿಟ್ಟು ರಾಜ್ಯಕ್ಕೆ ತಕ್ಷಣ 5 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಅಂಕಪಟ್ಟಿ

ಹುಬ್ಬಳ್ಳಿ ಹಾಗೂ ಬಾಗಲಕೋಟೆಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ, 2009 ರಲ್ಲಿ ರಾಜ್ಯ ಪ್ರವಾಹಕ್ಕೆ ತುತ್ತಾಗಿದ್ದಾಗ ಆಗಿನ ಪ್ರಧಾನಿ ಮನಮೋಹನ ಸಿಂಗ್‌ ಅವರು ರಾಜ್ಯಕ್ಕೆ 1600 ಕೋಟಿ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡಿದ್ದರು. ಈ ಸರ್ಕಾರಕ್ಕೆ ಹಣ ಕೊಡಲು ಏನು ರೋಗ? ಎಂದು ಕಿಡಿಕಾರಿದರು.

ಅಷ್ಟಕ್ಕೂ ಪ್ರವಾಹದಿಂದ ರಾಜ್ಯದಲ್ಲಿ ಈವರೆಗೆ ಎಷ್ಟು ನಷ್ಟ ಆಗಿದೆ ಎಂದು ಈವರೆಗೆ ಮಾಹಿತಿಯನ್ನೇ ಬಹಿರಂಗಪಡಿಸಿಲ್ಲ. ನನ್ನ ಮಾಹಿತಿ ಪ್ರಕಾರ ಪ್ರವಾಹದಿಂದ ರಾಜ್ಯದಲ್ಲಿ 1 ಲಕ್ಷ ಕೋಟಿ ಹಾನಿಯಾಗಿದೆ. 6 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ಮಂಡ್ಯ: 700 ಎಕರೆ ಕೃಷಿಭೂಮಿಗೆ ನೀರು

ಪ್ರವಾಹದ ಹಿನ್ನೆಲೆಯಲ್ಲಿ ಅಮಿತ್‌ ಶಾ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈಗಾಗಲೇ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಆದರೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಪ್ರಧಾನಿ ಮೋದಿ ಅವರು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಬಿಟ್ಟು ತಕ್ಷಣ 5 ಸಾವಿರ ಕೋಟಿ ತುರ್ತು ಪರಿಹಾರ ಬಿಡುಗಡೆ ಮಾಡಬೇಕು. ಉಳಿದ ಹಣವನ್ನು ಸರ್ಕಾರ ಹಾನಿ ವರದಿ ಸಲ್ಲಿಸಿದ ಬಳಿಕ ಬಿಡುಗಡೆ ಮಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಮೋದಿ, ಅಮಿತ್‌ ಶಾ ನೋಡಿದರೆ ಬಿಜೆಪಿಗರು ಗಡಗಡ ನಡುಗುತ್ತಾರೆ!

ಹುಬ್ಬಳ್ಳಿ: ರಾಜ್ಯದಲ್ಲಿ ಮಂತ್ರಿಮಂಡಲ ಇಲ್ಲದೆ ಸರ್ಕಾರ ನಡೆಯುತ್ತಿರುವುದು ಇದೇ ಮೊದಲು. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾರನ್ನು ನೋಡಿದರೆ ಗಡಗಡ ನಡಗುತ್ತಾರೆ.

ಬಿಜೆಪಿ ಹೈಕಮಾಂಡ್‌ಗೆ ಸಚಿವರ ನೇಮಕ ಮಾಡಲು ಏನು ಸಮಸ್ಯೆಗಳಿವೆಯೋ ಗೊತ್ತಿಲ್ಲ. ಯಡಿಯೂರಪ್ಪ ಅಮಿತ್‌ ಶಾ ಮರ್ಜಿಯಲ್ಲಿದ್ದಾರೆ. ಅವರು ಒಪ್ಪಿಗೆ ಕೊಟ್ಟಮೇಲೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಲೇವಡಿ ಮಾಡಿದರು.