ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ ಖಾಸಗಿ ಸುದ್ದಿವಾಹಿನಿಯ ವರದಿಗಾರ ಮೌನೇಶ್ ಪೋತರಾಜ ಕಸ ಸಾಗಿಸುವ ವಾಹನದಲ್ಲಿ ಮೃತದೇಹ ಸಾಗಿಸಿದ ಪೊಲೀಸರು

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತನ ಮೃತದೇಹವನ್ನು ಪೊಲೀಸರು ಕಸ ಸಾಗಿಸುವ ವಾಹನದಲ್ಲಿ ಕೊಂಡೊಯ್ದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಯಿಂದ ವರದಿಯನ್ನು ಕೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪೊಲೀಸರ ಕ್ರಮದ ಬಗ್ಗೆ ತಿಳಿದು ನೋವಾಯಿತು. ಈ ಬಗ್ಗೆ ಉತ್ತರ ವಲಯ ಎಡಿಜಿಪಿ ಮತ್ತು ರಸ್ತೆ ಸುರಕ್ಷತಾ ಆಯುಕ್ತರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

Scroll to load tweet…

ಖಾಸಗಿ ಸುದ್ದಿವಾಹಿನಿಯ ಶಿರಸಿ ವರದಿಗಾರ ಮೌನೇಶ್ ಪೋತರಾಜ(28) ಮೊನ್ನೆ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗುಂಡೂರು ಬಳಿ ಈ ಅವಘಡ ಸಂಭವಿಸಿದೆ.

ಅವರ ಮೃತದೇಹವನ್ನು ಪೊಲೀಸರು ಆ್ಯ0ಬುಲೆನ್ಸ್ ಬದಲಾಗಿ ಕಸ ಸಾಗಿಸುವ ವಾಹನದಲ್ಲಿ ಕೊಂಡೊಯ್ದಿದ್ದರು.ಪೊಲೀಸರ ಕ್ರಮಕ್ಕೆ ಸಾರ್ವಜನಿಕ ಹಾಗೂ ಮಾಧ್ಯಮ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.