ಸಿದ್ದರಾಮಯ್ಯ ತಮ್ಮ ವೈಯಕ್ತಿಕ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು ಭ್ರಷ್ಟಾಚಾರದ ಬಗ್ಗೆ ಇಬ್ಬರು ಚರ್ಚೆ ಬನ್ನಿ ಇಬ್ಬರು ಪರಸ್ಪರ ಮಾತನಾಡೋಣ'

ಬೆಂಗಳೂರು(ಫೆ.06): ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ರಾಜ್ಯ ಸರ್ಕಾರವನ್ನು ಭ್ರಷ್ಟಾಚಾರ, ಕಮಿಷನ್ ಏಜೆಂಟ್ ಸರ್ಕಾರ ಎಂದು ಬಹಿರಂಗವಾಗಿ ಜರಿದ ನಂತರ ಎರಡೂ ಪಕ್ಷಗಳ ನಾಯಕರ ನಡುವೆ ವಾಗ್ವಾದಗಳು ಹೆಚ್ಚು ರಂಗೇರಿವೆ.

ಇಂದು ಮತ್ತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವಿಟರ್ ಮೂಲಕ ಬಹಿರಂಗ ಚರ್ಚೆಗೆ ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವೈಯಕ್ತಿಕ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು ಭ್ರಷ್ಟಾಚಾರದ ಬಗ್ಗೆ ಇಬ್ಬರು ಚರ್ಚೆ ಬನ್ನಿ ಇಬ್ಬರು ಪರಸ್ಪರ ಮಾತನಾಡೋಣ' ಎಂದಿದ್ದು, ಲೋಕಪಾಲ್ ನೇಮಕಾತಿ, ಸಿಬಿಐ ನ್ಯಾಯಾಧೀಶ ಲೋಯಾ ಸಾವಿನ ತನಿಖೆ, ಅಮಿತ್ ಶಾ ಪುತ್ರ ಜಯ್ ಶಾ ಆಸ್ತೆ ದುಪ್ಪಟ್ಟು ಏರಿಕೆ ಹಾಗೂ ಕಳಂಕಯುಕ್ತ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ, ಚರ್ಚೆಗೆ ಆಹ್ವಾನಿಸಿದ್ದಾರೆ.

Scroll to load tweet…