ಇದೀಗ ಪರಿಶಿಷ್ಟಜಾತಿ, ಪಂಗಡಗಳ ವಿದ್ಯಾರ್ಥಿ ಗಳಿಗೆ ಉಚಿತ ಬಸ್‌ ಪಾಸ್‌, ಮೊಟ್ಟೆವಿತರಣೆ, ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಸಬ್ಸಿಡಿ ಹೆಚ್ಚಳ ಸೇರಿದಂತೆ ಮತ್ತೆ ಬಂಪರ್‌ ಕೊಡುಗೆಗಳನ್ನು ಘೋಷಿಸಿದೆ. ಪರಿಶಿಷ್ಟಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಈತನಕ ನೀಡುತ್ತಿದ್ದ ರಿಯಾ​ಯಿತಿ ದರದ ಬಸ್‌ ಪಾಸ್‌ ಈ ವರ್ಷದಿಂದ ಸಂಪೂರ್ಣ ಉಚಿತವಾ​ಗಲಿದೆ. ಪ್ರಸ್ತುತ ಪರಿಶಿಷ್ಟವಿದ್ಯಾರ್ಥಿಗಳು ಶೇ. 25ರಷ್ಟುಮೊತ್ತ ನೀಡಬೇಕಿತ್ತು.

ಬೆಂಗಳೂರು: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಮತಬ್ಯಾಂಕ್‌ ಎನಿಸಿದ ಪರಿಶಿಷ್ಟರಿಗೆ ಬಂಪರ್‌ ಕೊಡುಗೆ ಮುಂದುವರೆಸಿರುವ ರಾಜ್ಯ ಸರ್ಕಾರ ಇದೀಗ ಪರಿಶಿಷ್ಟಜಾತಿ, ಪಂಗಡಗಳ ವಿದ್ಯಾರ್ಥಿ ಗಳಿಗೆ ಉಚಿತ ಬಸ್‌ ಪಾಸ್‌, ಮೊಟ್ಟೆವಿತರಣೆ, ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಸಬ್ಸಿಡಿ ಹೆಚ್ಚಳ ಸೇರಿದಂತೆ ಮತ್ತೆ ಬಂಪರ್‌ ಕೊಡುಗೆಗಳನ್ನು ಘೋಷಿಸಿದೆ. ಪರಿಶಿಷ್ಟಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಈತನಕ ನೀಡುತ್ತಿದ್ದ ರಿಯಾ​ಯಿತಿ ದರದ ಬಸ್‌ ಪಾಸ್‌ ಈ ವರ್ಷದಿಂದ ಸಂಪೂರ್ಣ ಉಚಿತವಾ​ಗಲಿದೆ. ಪ್ರಸ್ತುತ ಪರಿಶಿಷ್ಟವಿದ್ಯಾರ್ಥಿಗಳು ಶೇ. 25ರಷ್ಟುಮೊತ್ತ ನೀಡಬೇಕಿತ್ತು.

ಅದೇ ರೀತಿ ಮೂರು ವರ್ಷದ ಒಳಗಿನ ಮಕ್ಕಳಿಗೆ ಅಂಗನವಾಡಿ ಮೂಲಕ ಎರಡು ದಿನಕ್ಕೊಮ್ಮೆ ಮೊಟ್ಟೆವಿತರಣೆ. 16 ವರ್ಷದೊಳಗಿನ ಹದಿಹರೆಯ ಹೆಣ್ಣುಮಕ್ಕಳಿಗೂ ಮೊಟ್ಟೆಹಂಚಿಕೆ ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಕಟಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪರಿಶಿಷ್ಟಜಾತಿ ಮತ್ತು ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆ ನಂತರ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಸುದ್ದಿಗೋಷ್ಠಿಯಲ್ಲಿ ಯೋಜನೆಗಳನ್ನು ವಿವರಿಸಿದರು. ಎಲ್ಲಾ ಇಲಾಖೆಗಳಲ್ಲಿ ಲಕ್ಷ್ಯ ಇರುವ ಅನುದಾನಗಳನ್ನು ಕ್ರೋಡೀಕರಿಸಿ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಈ ವರ್ಷ . 27,703 ಕೋಟಿಗಳನ್ನು ಒದಗಿಸಿದ್ದು, ಅದರಲ್ಲೂ ವಿವಿಧ ಯೋಜನೆಗಳ ಸಬ್ಸಿಡಿಯನ್ನು ಹೆಚ್ಚಿಸಲಾಗಿದೆ. ಜತೆಗೆ ಬಸ್‌ ಪಾಸ್‌ ಮತ್ತು ಮೊಟ್ಟೆವಿತರಣೆಗೂ ನಿರ್ಧರಿಸಲಾಗಿದೆ ಎಂದರು.

ತೆಲಂಗಾಣ ಮಾದರಿ: ತೆಲಂಗಾಣ ಮಾದರಿಯಲ್ಲಿ ಎಸ್ಸಿ, ಎಸ್ಟಿಸಮುದಾಯದ ಹೆಣ್ಣು ಮಕ್ಕಳಿಗೆ ಮೊಟ್ಟೆನೀಡಲು ಯೋಜನೆ ಜಾರಿಗೊಳಿಸಲಾಗುವುದು. ಎಸ್ಸಿ-ಎಸ್ಟಿಸಮುದಾಯದವರು ಅಂಗನವಾಡಿಗೆ ಮಕ್ಕಳನ್ನು ಕಳುಸುವುದಿಲ್ಲ. ಅಂತಹವರನ್ನು ಗುರುತಿಸಿ ಅಂಗನ ವಾಡಿಗೆ ಬರುವಂತೆ ಮಾಡಲು ತಿಂಗಳಿಗೆ 16 ಮೊಟ್ಟೆಗಳನ್ನು ನೀಡಲಾಗುವುದು. ಅದೇರೀತಿ ಎಸ್ಸಿ-ಎಸ್ಟಿಸಮುದಾಯದ ಹೆಣ್ಣುಮಕ್ಕಳು ವಯಸ್ಸಿಗೆ ಬಂದಾಗ ಆರೈಕೆ ಮಾಡಿಕೊಳ್ಳಲು ಶಕ್ತರಾಗಿರುವುದಿಲ್ಲ. ಇಂತಹ ಹದಿಹರೆಯದ ಹೆಣ್ಣು ಮಕ್ಕಳಿಗೆ ಪೌಷ್ಟಿಕತೆ ಹೆಚ್ಚಿಸಲು ಮೊಟ್ಟೆನೀಡಲಾಗುವುದು ಎಂದು ಅವರು ವಿವರಿಸಿದರು.

ಕೃಷಿ ಇಲಾಖೆಯಲ್ಲಿ ಪಂಪ್‌ಹೌಸ್‌ ಮತ್ತು ಗ್ರೀನ್‌ ಹೌಸ್‌ ನಿರ್ಮಿಸಲು ನೀಡುತ್ತಿದ್ದ ಶೇ.35ರಷ್ಟುಸಬ್ಸಿಡಿಯನ್ನು ಶೇ.90ಕ್ಕೆ ಹೆಚ್ಚಿಸಲಾಗಿದೆ. ಬಿತ್ತನೆ ಬೀಜಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನೂ ಶೇ.90ರಷ್ಟುನಿಗದಿ ಮಾಡಲಾಗಿದೆ. ಒಂದು ಲಕ್ಷ ಮಂದಿಗೆ ಅನಿಲಭಾಗ್ಯ ಹೆಸರಿನಲ್ಲಿ ಉಚಿತವಾಗಿ ಅನಿಲ ಸಂಪರ್ಕ ಕಲ್ಪಿಸಲಾಗುತ್ತದೆ. ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ಸಂಜೀವಿನಿ ಮೂಲಕ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸಿಗುವಂತೆ ಮಾಡಲಾಗುತ್ತಿದೆ ಎಂದು ಆಂಜನೇಯ ತಿಳಿಸಿದರು.
ಇದೇ ವೇಳೆ ತುಂಗಭದ್ರಾ ಹಿನ್ನೀರಿನಲ್ಲಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಎಸ್‌ಸಿಪಿ,ಟಿಎಸ್‌ಪಿ ಅನುದಾನದಲ್ಲಿ . 2000 ಕೋಟಿ ಬಳಸಿಕೊ ಳ್ಳಲಾಗುತ್ತಿದೆ. ಚಳ್ಳಕೆರೆ, ಪಾವಗಡ ಮತು ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಪರಿಶಿಷ್ಟರು ಹೆಚ್ಚು ಇದ್ದಾರೆ ಎನ್ನುವ ಕಾರಣಕ್ಕೆ ಈ ನೀರಾವರಿ ಯೋಜನೆಗೆ ಎಸ್‌ಸಿಪಿ,ಟಿಎಸ್‌ಪಿ ಅನುದಾನ ಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದರು.