ಬೆಂಗಳೂರು[ಜು.11] : ರಾಜ್ಯ ರಾಜಕಾರಣದ ಹೈಡ್ರಾಮಾ ಮುಂದುವರಿದಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶಾಸಕರ ರಾಜೀನಾಮೆ ಸಂಖ್ಯೆ ನಾಯಕರ ಚಿಂತೆ ಹೆಚ್ಚಿಸುತ್ತಿದೆ. ಇತ್ತ ಅತೃಪ್ತರ ಮನ ಒಲಿಕೆ ನನ್ನಿಂದ ಅಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಕೈ ಚೆಲ್ಲಿ ಕುಳಿತಿದ್ದಾರೆ. ಆದರೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮಾತ್ರ ಎಲ್ಲವೂ ಸರಿಯಾಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ.

"

ಹೈ ಕಮಾಂಡ್ ಎದುರೇ ಸಿದ್ದರಾಮಯ್ಯ  ಕೈ ಚೆಲ್ಲಿ ಕುಳಿತಿದ್ದು, ಏನಾದರೂ ಮಾಡಿಕೊಳ್ಳಿ, ನಾನಂತೂ ಮನ ಒಲಿಸಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಕರ್ನಾಟಕ ರಾಜಕೀಯ ಪ್ರಹಸನದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೀಗೆ ಮುಂದುವರಿದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ತಮ್ಮಿಂದ ಏನು ಮಾಡಲಾಗದು ಎಂದು ಗುಲಾಂ ನಬಿ ಆಜಾದ್ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

ಆದರೆ ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್ ನಿರಂತರ ಪ್ರಯತ್ನ ನಡೆಸುತ್ತಿದ್ದು, ನಮ್ಮ ಶಾಸಕರು ಮರಳಿ ಬರಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.